Wednesday, June 25, 2008

ಪರರು....?

ಮಾತೆತ್ತಿದರೆ ನಮ್ಮಲ್ಲಿ ಹುಟ್ಟಿಕೊಳ್ಳುತ್ತಾರೆ ಆ ಪರರು.....
ಈಪರರು ಎಂಬಸ್ಲೋಗನ್ ಪುತ್ರರು.ತಮ್ಮಿರುವ ತೋರ್ಪಡಿಸುವಿಕೆಯವೀರಪುತ್ರರು
ಮೊಸರಾದರು ಸರಿ ಕಲ್ಲೆಲ್ಲಿ ಸಿಗುವುದೋ ಎಂದು ಕೈಯ್ಯಾಡಿಸುವರು
ಇವರಿಗೆ ಗೊತ್ತಿಲ್ಲ ನಿಜದ ನೋವು.ಯಾರೋ ತಿನ್ನಿಸಿದ ಮೇವ ತಿಂದು
ವಾಕರಿಕೆ ಬರುವಂತೆ ಮೆಲುಕ ಹಾಕುವರು ಅವರು ಹೇಳಿಕೊಟ್ಟ ಹೂಸುಬಿಟ್ಟ ತಿರುಳಿಲ್ಲದ
ಸಿದ್ದಾಂತ ನಿಸ್ಸತ್ವ.
ಕಲ್ಲುಹೊಡೆಯುವರು ಮಾಧ್ಯಮದ ಮುಂದೆ ಅರಚುವರು ಕಂಡವರೆದೆಗೆ ಗುಂಡಿಕ್ಕುವರು
ಮಾನವೀಯತೆಯ ಡೈನಾಮೆಟ್ಟು ಇಟ್ಟು ಸಿಡಿಸುವರುಇವರೆಲ್ಲ ಯಾರ ಪರರು
ದಿಕ್ಕುದೆಸೆಗಳ ಮನಸು ಮನಸುಗಳ ಅರ್ಥ ಗೊತ್ತಿಲ್ಲದವರು,
ದೇಶದ ಬ್ರಾತತ್ವದ ಮೇಲೆ ರಕ್ತದ ಕಲೆಯಂಟಿಸುವವರು ,ಕಮ್ಮಿನಿಶ್ಟೆಯವರು...
ದಾಸ್ಯವೆ ಪರಮ ಪಾವನಅಂದುಕೊಂಡವರು
ರೂಪಿಸಲು ಹೊರಟಿರುವರು ಎಲ್ಲರ ಭವಿಶ್ಯ ದೇಶದ ಭವಿಶ್ಯ.ಇವರ ಜೊತೆಗಿರುವರು
ಒಂದಶ್ಟು ಬುದ್ದಿವಂತರು ಎಂದೆನಿಸಿಕೊಂಡ ಮುಖವಾಡ ಪುರುಶರು
ಭಾರತ ಬೆಳಗಲು ಸಾಕಲ್ಲವೆ.

Tuesday, June 24, 2008

ವಿನಂತಿ

ಹೋಲಿ ಹಬ್ಬಕ್ಕೆ ಬಣ್ಣದೋಕುಳಿ ಇದ್ದರೆ ಸಾಲದೆ
ಧರ್ಮದ ಕತ್ತಲಲ್ಲಿ ರಕ್ತದೋಕುಳಿ ಬೇಕೆ........?
ಮನಚಿಗುರಿಸೋ ವಸಂತ ಇರಲಿ
ಕಪಟ ಗಿಲೀಟುಗಳು ಕಡಲತಳ ಸೇರಲಿ
ಎಲ್ಲರಲ್ಲು
ಇರುವುದೊಂದೇ ಬಣ್ಣದ ರಕ್ತ ಅದಕ್ಕ್ಯಾಕೆ ಮಸಿ ಬೆರೆಸಬೇಕು
ದ್ವೇಶದ ಆಯುಧ ಹಿಡಿದು ಯಾಕೆ ಹೆಪ್ಪುಗಟ್ಟಿಸಬೇಕು
ಪ್ರೇಮಿಗಳ ಮಧ್ಯೆ ಕೆಂಪು ಗುಲಾಬಿಯಂತಿರಲಿ ಅದು
ಜಾತಿ ಧರ್ಮಗಳ ಮಧ್ಯೆ ಬಾವುಕ ಅಮ್ರತವಾಗಲಿ

ಸವಿಯ....ಸವಿ

ಸಖ ಸಖಿಯಾಗಿದ್ದಾಗ ಮಾತ್ರ ಸವಿಯಿದ್ದರೆಸಾಕೆ
ದಂಪತಿಗಳಾದಮೇಲೆ ಬೇಡವೆ ಸುಖ
ಲವ್, ತಾಳಿಗೆ ಮುಂಚಿನಮಾತು ಅನ್ನೋ ಸೂತ್ರಬೇಡ
ಮದುವೆಯ ನಂತರವೂ ಇರಲಿ ಅದರ ಪಿಸುಮಾತು
ಆಪಿಸುಮಾತು ಮತ್ತೆ ಮಂಚಕ್ಕೆ ಮಾತ್ರ ಸೀಮಿತವಾಗೋದು ಬೇಡ.....ಇರಲಿ
ನೀರಕೊಳದಲ್ಲಿ ಹಂಸದಚೆಲ್ಲಾಟದಂತೆ ನಿರಂತರ
ಒಡೆದು ಮತ್ತೆ ಹುಟ್ಟುವ ಅಲೆಗಳ ಚೈತನ್ಯ ಬೆಳ್ಳಿ ನೊರೆ ನೂಪುರದಂತೆ

Monday, June 23, 2008

ಚಿಲ್ಲರೆ ವಿನಿಯೋಗಿಸಿ

ನೊಣ ಹಾರುತ್ತಿತ್ತು... ಲೈಟ್ ಕಂಬದ ಮೇಲೆ ಕಾಗೆ ಇಣುಕುತ್ತಿತ್ತು
ತೊಟ್ಟಿಯಲ್ಲಿ ಅರೆಜೀವಾವಸ್ತೆಯಲ್ಲಿ ಹಸುಳೆ ಬಿದ್ದಿತ್ತು
ಯಾರೋ ಓಡಿಸಿದರಂತೆ ನಾಯಿಗಳು ಬಾಯಿ ಹಾಕುವಾಗ
ಗೆಳೆಯನೊಬ್ಬ ಹೇಳಿದ್ದು ನೆನಪಾಯ್ತು....
ಮಿಲನ ಮತ್ತು ಸ್ಕಲನಗಳ ಪಲಿತಾಂಶ ನಮ್ಮ ಜನನ
ಇರಲಿ......ಹಾಗಂದುಕೊಂಡವರಲ್ಲಿ ವಿನಂತಿ
ಜನಿಸಲೆಂದೇ ಸ್ಕಲಿಸುವವರು ಬಿಟ್ಟು.....
ಸ್ಕಲನಕ್ಕಾಗೇ ಆಲಿಂಗಿಸುವವರು ಕಾಂಡಮ್ ಆದ್ರು ಬಳಸ್ರಪ್ಪ
ನಿಮ್ಮ ರಕ್ತಾನ ಕಾಗೆ ನಾಯಿಗಳು ನೆಕ್ಕುವ ಮುನ್ನ

Thursday, June 19, 2008

ಕಲ್ಯಾಣಿ

ಪುಟ್ಟದಾಗಿ ಮಲಗಿದ್ದರು,ಎಡ ಮಗ್ಗುಲಿಗೆ ಮಲಗಿದ್ದವರು ಕಾಲು ಎದೆಯೆತ್ತರಕ್ಕೆ ಮಡಚಿದ್ದಕ್ಕೆ ಇನ್ನೂ ಚಿಕ್ಕದಾಗಿ ಕಾಣುತ್ತಿದ್ದರು.ಎರಡೂಕೈಗಳಿಂದ ಕಾಲು ಮತ್ತೆ ಕೆಳಕ್ಕೆ ಜಾರದಂತೆ ಹಿಡಿದುಕೊಳ್ಳುತ್ತಿದ್ದರು ಚಳಿಗೆ ಮುದುರಿಕೊಳ್ಳುವ ಮಕ್ಕಳಂತೆ.ಚಿಕ್ಕಂದಿನಲ್ಲಿ ನಾವೂ ಹೀಗೆ ಮುಂಜಾವದಲ್ಲಿ ಇವರ ಸೆರಗೊಳಗೆ ಮನೆ ಮಾಡಿಕೊಂಡು ಮುದುರಿಕೊಳ್ಳುತ್ತಿದ್ದುದು ಇನ್ನೂ..........
ನೆನಪಿದೆ ಆ ನೆನಪಿನ ಪುಟಗಳನ್ನು ಮತ್ತೆ ಇವರು ತೆರೆಸುತ್ತಿದ್ದಾರೆ ತನ್ನ ಅಸ್ತಂಗತದಲ್ಲಿ.ಗೊರ್ರ್ ಗೊರ್ರ್ ಸದ್ದು ಮಾಡುತ್ತ ಕಣ್ಣು ಬಿಟ್ಟುಕೊಂಡೇ ಯೊವುದೋ ಲೋಕದಲ್ಲಿ ವಿಹರಿಸುತ್ತಿದ್ದವರು ಮತ್ತೆ ತನ್ನ ಮುಖದ ಹತ್ತಿರ ಕೈ ತಂದು ಏನೋ ತಡಕಾಡಲು ಶುರು ಮಾಡಿದರು.
ಗೋಡೆ.....
ತಡೆಗೋಡೆ....,
ಅವರಿಗೆ ಆದಸ್ಟು ಬೇಗ ಸಾವಿನ ಬೆಳಕು ಬೇಕಿತ್ತು. ಆ ಸಾವಿಗೆ ಅವರು ಮಲಗಿದ್ದ ಕೋಣೆಯ ಗೋಡೆ ಅಡ್ಡವಾಗಿದೆ ಎಂದುಕೊಂಡಿದ್ದರೋ ಏನೊ, ಅವರಿಗೆ ಆ ಕೋಣೆ ಬೇಡವಾಗಿತ್ತು.ಯಾವತ್ತೂ ಕೋಣೆಯೊಳಗಿನ ಜೀವನವನ್ನು ಬಯಸಿದವರಲ್ಲ ...ಈಗ ಗೋಡೆಯಾಚೆ ಸರಿಸುವಂತೆ ಅಂಗಲಾಚುತಿದ್ದರು ,ಆ ಗೋಡೆ ಸರಿಸಿ ಹಾಲಿಗೆ ಬಂದರೆ ಹಸಿರು ಕಾಣಬಹುದು ಅನ್ನುವ ಆಸೆಯೋ ಏನೊ.ಅವರ ಅಂಗಲಾಚುವಿಕೆಯಲ್ಲಿ ಕೈಲಾಗದವಳೆಂಬ ದುಖವಿತ್ತು....ಒಂದು ಸರ್ತಿ ನನ್ನನ್ನ ಅರ್ಪಿಸಿಕೊಂಡುಬಿಟ್ರೆ ಸಾಕು ಅನ್ನುವ ಸಂಕಟದ ನಿವೇದನೆಇತ್ತು..ಆದರೆ ನಮಗೆ ಅದು ಅವರ ಕೆಟ್ಟ ಹಟ ಆಗಿತ್ತು.ಅದನ್ನೆ ಕೆಲವೊಂದು ಸರ್ತಿ ಅವರನ್ನು ನಾಲ್ಕೈದು ತಲೆದಿಂಬು ಗೋಡೆಗಾನಿಸಿ ಒರಗಿಸಿ ಕತೆ ತರಹ ಹೇಳಿದಾಗ ನಾನು ಆ ತರದವಳಲ್ಲ ಎಂದು ಹೇಳುವ ಪ್ರಯತ್ನ ಮಾಡುತಿದ್ದರು.
ಕತೆಹೇಳ್ತ ಹೇಳ್ತ ಊಟದ ತಟ್ಟೆ ತಂದರೆ ಮಕ್ಕಳಂತೆ ಮುಖ ಗೋಡೆಗೆ ಮುತ್ತು ಕೊಡುತ್ತಿತ್ತು.ಮಕ್ಕಳಿಗು ಮುದುಕರಿಗು ವ್ಯತ್ಯಾಸ ಇಲ್ಲ ಅನ್ನುವ ಮಾತಿಗೆ ಎಲ್ಲೂ ಚ್ಯುತಿ ಬರದಂತೆ ನಡೆದುಕೊಳ್ಳುತ್ತಿದ್ದರು.ಜೊತೆಗೆ ಮರಿಮಕ್ಕಳೊಂದಿಗೆ ಜಗಳಕ್ಕಿಳಿದು ಕೈಲಾಗದೆ ತನ್ನ ಬೆರಳನ್ನು ಹಲ್ಲಿಲ್ಲದ ಬಾಯಿಯಿಂದ ಕಚ್ಚಿಕೊಳ್ಳುವ ಅಂದವನ್ನು ಹೇಗೆ ಹೇಳಳಿ.
ನಾನು ಕಂಡ ನನ್ನ ತಿಳುವಳಿಕೆಯ ಮುವತ್ತನಾಲ್ಕು ವರುಶಗಳ ಅಜ್ಜಿಯ ೯೦ರ ಮೇಲಿನ ದೇಹ ಯಾವತ್ತೂ ಸ್ವಾಸ್ಥ್ಯ ಕೆದಿಸಿಕೊಂಡಿದ್ದೆ ಇಲ್ಲ ಆರೋಗ್ಯ ಮತ್ತು ಮನಸ್ಸು ಎರಡರಲ್ಲು.ಮಕ್ಕಳಿಗಾಗಿ ಮೊಮ್ಮಕ್ಕಳಿಗಾಗಿ ಸದಾ ಯೋಚಿಸುವವರು,ದೇವರಲ್ಲಿ ಬೇಡುವವರು....ಆದರೆ ಗಂಡ ಜೀವಂತ ಇರುವವರೆಗೂ ಅವರೊಂದಿಗೆ ಸದಾ ಅರೆ ಮುನಿಸು ಮನೆಯವರೊಂದಿಗೆ ಗಂಡನ ಬಗ್ಗೆ ಏನಾದರೊಂದು ದೂರು ಸರ್ವೇ ಸಾಮಾನ್ಯ ಆಗಿತ್ತು.ಗಂಡ ಸತ್ತ ನಂತರ ಅವರ ನೆಪದಲ್ಲೇ ಕೊರಗುತ್ತಿದ್ದರು,ಜೋರಾಗಿ ಆಕಳಿಕೆ ಬಂದರೂ ಅವರೇ ಬಂದಿದ್ದಾರೆ ಅವರಿಗೇನೊ ಸಮಾಧಾನ ಆಗಿಲ್ಲ ಅನ್ನೋತರ ಮಾತಾಡಿ ಎಲ್ಲರಿಂದಲೂ ನಗಿಸಿಕೊಳ್ಳುತ್ತಿದ್ದರು, ಜೊತೆಗೆ ಕೆಲಸದವರಿಂದಲೂ ಕೆಲಸರ್ತಿ ಅಪಹಾಸ್ಯಕ್ಕೊಳಗಾಗಿ ತನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ ಎಂಬಂತೆ ಒಂಟಿಯಾಗಿ ಕೊರಗುತ್ತಿದ್ದರು.
ಇವತ್ತು ಮೊಮ್ಮಕ್ಕಳ ದೇಹವೂ ಗಟ್ಟಿಯಾಗಿದೆ ಅಂದರೆ ಚಿಕ್ಕಂದಿನಲ್ಲಿ ಹಸು ಹಾಲು ಕುಡಿದಿರುವುದು ಮಾತ್ರವಲ್ಲ......ಆ ಹಸುವಿಗೆ
ಚಳಿ ಮಳೆ ಬಿಸಿಲೆನ್ನದೆ ಅಜ್ಜಿ ಹೊತ್ತುತಂದು ಹಾಕಿದ ಹುಲ್ಲು ಕಾರಣ ಈ ರೀತಿಯ ಕೆಲಸಗಳು ಅವರಿಂದ ನಿರಂತರವಾಗಿ ನಡೀತಾ ಇತ್ತು......ನೆನಪಿಗೆ ಬಂದಾಗ ಜುಮ್ ಅನ್ನುತ್ತದೆ ಎಶ್ಟು ಸರ್ತಿ ಹುಲ್ಲಿನೊಂದಿಗೆ ತನ್ನ ಕೈಬೆರಳುಗಳನ್ನೂ ಕೊಯ್ದುಕೊಂಡಿಲ್ಲ ರಕ್ತ ತೊಟ್ಟಿಕ್ಕಿಲ್ಲ ಅದನ್ನೆಲ್ಲ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ, ಅವರಲ್ಲಿದ್ದುದು ಹಸುವಿನ ಹೊಟ್ಟೆ ತುಂಬಿಸೋದು ಅದರಿಂದಮಕ್ಕಳಿಗೆಶ್ಟು ಹಾಲು ಸಿಕ್ತು ಅನ್ನುವುದು ಮಕ್ಕಳು ....,ನಕ್ಕರೋ ಅಜ್ಜಿಗೆ ನೆಮ್ಮದಿ.
ಇವತ್ತು ಕಾಲಚಕ್ರದ ತೀರ್ಮಾನಕ್ಕೆ ಸಿಕ್ಕ ಆ ದೇಹ ತೇಯ್ದ ಗಂಧದ ಕೊರಡು.....ಬತ್ತಿ ಹೋಗಿದೆ.....ಸುಕ್ಕುಗಟ್ಟಿದೆ......ಅರ್ಧ ಚಂದ್ರಾಕ್ರತಿಯಾಗಿದೆ...ದೊಡ್ಡ (ಅಜ್ಜಿ)ಅನ್ನುವ ಘಮ್ಮೆನ್ನುವ ಪರಿಮಳ ಮಾತ್ರ ಸೂಸುತ್ತಿದೆ. ಮುಟ್ಟಿದರೆ ಮಾತ್ರ ತನ್ನ ಇರುವನ್ನು ಕೈ ಸ್ಪರ್ಶಕ್ಕಾಗುವಶ್ಟು ಉಸಿರಿನ ಬೆಚ್ಚನೆಯನಿಟ್ಟು ಕರಕೊಂಡು ಹೋಗುವವನಿಗೆ ಕಾಯುತ್ತಿದೆ.
ಮೊಮ್ಮಗನ ಅಕಾಲಿಕ ಸಾವಾದಾಗ ಅವರಾಡಿದ್ದ ಮಾತುಗಳು ಈಗಲೂ ನೆನಪಿದೆ ಕರ್ಕೋಬಾರ್ದಿತ್ತ ದೇವ್ರೆ ಎಳೆಉಸಿರ ಬದಲು ನನ್ನನ್ನು....ಹಾಸಿಗೆ ಹಿಡಿದು ಮಲಗಿದ್ದ ಪುಟ್ಟ ಮೊಮ್ಮಗನ ಚಿಕ್ಕ ದೇಹದ ಮುಂದೆ ಆ "ದೊಡ್ಡ" ಜೀವ ದಿನಾ ದೇವರಲ್ಲಿ ಬೇಡುತ್ತಿದ್ದುದು ಒಂದೆ ಮಗೂನ ನಮ್ಮ ಕೈಗೆ ಬಿಸಾಕಪ್ಪಾ ಎಂದು .....ಆದರೂ ಅರ್ಥವಿಲ್ಲದ ಸಾವನ್ನು ಜಾಣ ಕಿವುಡು ಪ್ರದರ್ಶಿಸುತ್ತಲೆ ಕೈಮುಗಿಸಿಕೊಂಡ ದೇವರು ದಯಪಾಲಿಸಿದ್ದರು.ಆವತ್ತು ಆ ರೀತಿ ಬೇಡಿಕೊಂಡಿದ್ದ ಜೀವ ಇಂದು ನನ್ನನ್ಯಾಕೆ ಇನ್ನೂ ಕಾಯಿಸ್ತೀಯ ಅಂತಿದೆ ಅದೇ ದೇವರಲ್ಲಿ.
ಅಳಿಯ ಸತ್ತಾಗಲೂ ಅದನ್ನೇ ಬೇಡಿಕೊಡಿತ್ತು ದೊಡ್ಡ (ಅಜ್ಜಿ)
ಹಿಂದೊಮ್ಮೆ ಮಗ ಸತ್ತಾಗಲೂ.....
ದೊಡ್ಡ ಅಂದರೆ ನನ್ನ ಅಮ್ಮನ ಅಮ್ಮ
ಹಾಗಾದರೆ ಅಮ್ಮ ಇರುವುದೆ ತ್ಯಾಗದ ಅರ್ಥಕ್ಕಾಗಿಯಾ...?ಸಾಮೀಪ್ಯದ ಇನ್ನೊಬ್ಬರ ಸಾವಿಗಿಂತ ತನಗೇ ಬಂದಿದ್ದರೆ ಒಳ್ಳೆಯದು ಎಂಬುದಕ್ಕಾಗಿಯೋ......
ಹೊತ್ತು ಹುಟ್ಟುವ ಮೊದಲೇ ಎದ್ದು....ಹೊತ್ತು ಮಲಗಿದ ನಂತರವೂ ಎಚ್ಚೆತ್ತುಕೊಂದೇ ಇದ್ದು ತನ್ನವರಿಗಾಗಿ ಚಿಂತಿಸುವುದೆ ಅಮ್ಮಂದಿರ ಹುಟ್ಟುಗುಣಾನ... ಅಥವ ಆ ಹುಟ್ಟೇ ಅದಕ್ಕಾಗಿಯೋ....ಶಾಪವೋ....ಹಿಂದಿನ ಜನ್ಮದ ಶಾಪ ವಿಮೋಚನೆಯೋ...
ಅಥವ ಸ್ರಸ್ಟಿಯ ತಾರತಮ್ಯವೋ.....
ನೂರಾರು ಮೆಟ್ಟಿಲುಗಳ ಅಂಕಣ ...ಆಟ ಆಡೋರು...ಆಡ್ಸೋರು...ಹರಟೆ ಹೊಡೆಯೋರು....ಹೊತ್ತು ಕಳೆಯೋರು....ಗೊತ್ತುಗುರಿಇಲ್ಲದವರು...ಪವಿತ್ರಸ್ನಾನಮಾಡೋರು.......ಪೂಜೆ ಪುನಸ್ಕಾರಕ್ಕೆ ಬರೋರು....ಈ ರೀತಿಯ ಎಲ್ಲರಿಗು ಒಳ್ಳೆಯದನ್ನೆ ಬಯಸುತ್ತದೆ "ಕಲ್ಯಾಣಿ".ದುಖದುಮ್ಮಾನಗಳಲ್ಲಿರುವವರು ತನ್ನ ಮಗ್ಗುಲಲ್ಲಿ ಕುಳಿತರೆ ಸಾಂತ್ವನ ಹೇಳುತ್ತದೆ,ಒಳ್ಳೆಯದಾಗಲೆಂದು ಸಾವಿರಮೆಟ್ಟಿಲಾಚೆ ಇರುವ ದೇವರನ್ನು ಬೇಡುತ್ತದೆ.ಎಲ್ಲವೂ ನಿಸ್ವಾರ್ಥದ ಸಾಂತ್ವನ.
ಈಗ ಅಂಥಾ ಕಲ್ಯಾಣಿಯ ಒಡಲೇ ಬತ್ತಿದರೆ....ನನಗೂ ನಿನಗೂ ಇದು ಕೊನೆಯ ನೋಟ ಎಂಬಂತೆ ನೋಡುತ್ತ....ನೋಡುತ್ತಾ..... ಬದುಕುವ ಆಸೆ ಇನ್ನೂ ಇದೆ ಎಂದು ಹೇಳುತ್ತಿದೆಯಾ ಮತ್ತೆ ಆನೋಟ ...ಮುಗಿದ ಅಧ್ಯಾಯಕ್ಕೊಂದು ಬಿಂದು ನೀರ ಕೇಳುತ್ತಿದೆಯಾ....
ಇನ್ನೊಬ್ಬರ ಕೈ ಆ ನಿಸ್ತೇಜ ಕಣ್ಣನ್ನು ಮ್ರುದುವಾಗಿ ತೀಡಿತು.
ಕಲ್ಯಾಣಿಯನ್ನು ನೆನೆದು ಒಂದು ಹನಿ ಕಣ್ಣೀರು ಒತ್ತರಿಸಿ ಬಂದರೆ ಕಲ್ಯಾಣಿ ಮತ್ತೆ ಹುಟ್ಟುವಳೇ........
ನನ್ನ ಅಜ್ಜಿಯ ಹೆಸರು "ಕಲ್ಯಾಣಿ"
ಒಂದು ಹನಿ ಕಣ್ಣೀರು ಹುಟ್ಟು ಸಾವುಗಳ ಮಧ್ಯೆ ಸಂಬಧದ ಕಮಿಟ್ಮೆಂಟುಗಳಾ......
ಬತ್ತಿಹೋಗುತ್ತಿರುವ ದೇಹದೆದುರು ಮೌನವಾಗಿ ದಿಟ್ಟಿಸುತ್ತ ಕುಳಿತಿದ್ದುದು.......ಮುಂದೆ
ನನಗೂ ಬರುವ ಸಾವಿನ ಸೋಲೊಪ್ಪಿಕೊಳ್ಳುವ...,ಎದುರಿಗಿರುವವರನ್ನು ಕಳೆದುಕೊಳ್ಳುವ ರಾಜಿಸೂತ್ರಾನ
ಕೊನೆಗಳಿಗೆ ಕಣ್ಣಿಗೆ ಕಣ್ಣುಕೊಟ್ಟು ನೆಟ್ಟ ನೋಟ...ಸಂಬಂದಗಳಿಗೆ ಸಂದಾಯವಾದ ದಿನಗಳ
ಒಟ್ಟು ಮೊತ್ತದ ಕಾಣಿಕೆಯಾ......ನನ್ನಲ್ಲು
ನಿನ್ನಲ್ಲು

Monday, June 16, 2008

ಕೋರಸ್

ಕೋರಸ್ ಹಾಡುತ್ತಿವೆ
ಮುಂಗಾರು ಶುರು ಆಯ್ತೆಂದು......
ಸಾಲ್ಸ ಜಾಸ್ ಆಡುತ್ತಿವೆ
ಸಧ್ಯ ಜೀವ ಭಯ ಇಲ್ಲವೆಂದು.....ನೀರ ಅಮಾಯಕ ಮೀನುಗಳು
ಚಿಕ್ಕ ಬೋಟುಗಳು ನೀರಿಗಿಳಿಯುವುದಿಲ್ಲ
ದೊಡ್ಡದಕ್ಕೂ ಸಧ್ಯ ಅನುಮತಿಯಿಲ್ಲ
ಸಪ್ಪೆ ಮೋರೆ ಮಾಡಿದ ಜನರ ರುಚಿಕೆಟ್ಟ ಬಾಯಿ ಮತ್ತೆ ತೆರೆಯುವುದರೊಳಗೆ
ಸಂತಾನದ ಆಸೆ......ನಮ್ಮ ಕಂದಮ್ಮಗಳ ನೀವು ತಿಂದರು ಸರಿಯೆ
ಮಿಲನಕ್ಕಾದರೂಬಿಟ್ಟುಕೊಟ್ಟಿರಲ್ಲ ......ಪಿಸು ಮಾತಿಗಾದರು ಆಕಾಶ ಮೋಡಕಟ್ಟಿತಲ್ಲ
ಸ್ರಸ್ಟಿ ಮಾಡಿದೋನಿಗೂ..... ಬುಟ್ಟಿ ಬಲೆ ಹಿಡಿದವರಿಗೂ
ಬೂತಾಯಿ
ಬಂಗುಡೆ
ಎಟ್ಟಿ
ಕೊಲ್ಲತರು
ಮಾಂಜಿ
ಮರ್ವಾಯಿ
ಪಚ್ಚಿಲೆ
ಎರಬ್ಬಯಿ
ಬೊಂದಾಸ್
ಕುರ್ಚಿ
ನಂಗ್
ಬೆರಕ್ಕೆ
ಮದಿಮಾಲ್
ಕಲ್ಲುರ್
ಕಾಂಡಯ್
ಪಾಂಬೊಲು
ದೆಂಜಿ
ತೇಡೆ
ಮುಗುಡು
ಬಾಲೆ
ಅಬ್ರೋನಿ
ದಿಸ್ಕೊಮೀನ್
ಚೋ
ಸುದೆಮೀನ್
ಕಾಟ್ಲ
ಬಲ್ಲಿಯಾರ್
ಸುವಾಡಿ
ಮುರು
ಮಣಂಗ್
ನಲ್ಲೀ
ಕೊಂತಿ
ಕೊಡ್ಡೈ
ಬೊಲ್ಲೆಂಜಿರ್
ಅಂಜಲ್
ಮಾಲೆಮೀನ್.........
ಎಲ್ಲರಿಗು ನಮ್ಮ ವಂದನೆಗಳು.....ನಮಗೆ ನಿಮ್ಮಂತೆ ಜೀವಭಯದ ಹಂಗಿಲ್ಲ
ಸತ್ತರು ಇನ್ನೊಬ್ಬರ ಉಪಯೋಗಕ್ಕೆ ಬಂದ್ವಲ್ಲ ಅನ್ನುವ ಸಾರ್ತಕ ಸಂತೋಶ
ನಿತ್ಯ ನಮ್ಮನ್ನು ನಲಿಸುತ್ತದೆ.....ನೀನೂ ಇವತ್ತಲ್ಲ ನಾಳೆಯಾದರು ಸಾಯೋನೆ
ಕೊಳೆತು ಹೋಗುವ ನಿನ್ನ ಜೀವದ ಜೊತೆಗೆ ಕಣ್ಣನ್ನೂ ಕೊಳೆಸಬೇಡ
ಒಂದು ಭಾಗವಾದರು ಇನ್ನೊಬ್ಬರ ಉಪಯೋಗಕ್ಕಿರಲಿ
ವ್ಯರ್ಥವಾಗೋದು ಸಾರ್ಥಕವಾಗಲಿ

ಟಾರ್ಗೆಟ್

ಜೀವನದ ಟಾರ್ಗೆಟ್ ಯಾವುದು
ಸೆಂಚುರಿ ಬಾರಿಸೋದು......?
ಸೆಂಚುರಿ ಬಾರ್ಸಿದ್ರೆ ಅಭಿನಂದನೆಗಳ ಮಹಾಪೂರ ಮನೆ ಮಂದಿಗೆಲ್ಲ ಗಡದ್ದು ಊಟ
ನೆಪವಾದ ಸೆಂಚುರಿಗೆ ಮಾತ್ರ ಪಾಕಗಳ ಮುಟ್ಟಲು ಗಟ್ಟಿ ಹಲ್ಲಿಲ್ಲ ಅವರ ಮಾತೆಲ್ಲ ಸಿಹಿ ,ಮಾತಂತೆ ಮೊತ್ರವೂ ಸಿಹಿ
ಬಾಯಲ್ಲಿ ಜೊಲ್ಲು ಸುರಿದ್ರು ಕದ್ದೊರಿಸಿದ ಅವರಲ್ಲಿ ನಂಗೆ ಬಾಯಿ ರುಚಿ ಸತ್ತೋಗಿದೆ ಎಂಬ ಬೊಚ್ಚು ಬಾಯಿ ನಗು
ಮರುದಿನ ಮನೆಮಗಳೊಬ್ಬಳ ಪುಟ್ಟನಿಗೆ ಹೊಟ್ಟೆಯುಬ್ಬರ,
ಪಾಪ ಸೆಂಚುರಿಯ ಆಸೆಗು ಪವರ್ ಮಾತ್ರ ಸಖತ್ತಾಗಿದೆ ಮಗುಗೆ ಕಕ್ಕಸಿಗೆ ಹೋಗಿ ಹೋಗಿ
ಸುಸ್ತಾಗುವಸ್ಟು
ಇನ್ನು ಕೆಲವು ಸೆಂಚುರಿಗಳದ್ದು , ಸೆಂಚುರಿ ಪಕ್ಕ ಇರುವವರದ್ದು ಇನ್ನೊಂದು ರೀತಿಯ ಟಾರ್ಗೆಟ್
(ಮಿನಿಮಂಗಿಂತ ಹೆಚ್ಚಿನ ಬೋನಸ್ ಪಡೆದಿರುವವರು ೬೫+ಇವತ್ತಿನ ಜೀವನಕ್ಕೆ)
ಎಲ್ಲದಕ್ಕು ಕಂದಮ್ಮಗಳ ಹಾಗೆ ಮಿಕ್ಕವರನ್ನ ಟಾರ್ಗೆಟ್ ಮಾಡೋರೆ
ಇನ್ನು ಕೆಲವು ಸೆಂಚುರಿಗಳದ್ದು ಹೀಗೆ
ಮಕ್ಕಳಿಗೆ ಟಾಯ್ಸ್ ಬದಲು ಇವರೆ ಬಲು ಮೆಚ್ಚು
ಇನ್ನು ಕೆಲವರು ವೇದ ಪುರಾಣಗಳ ಪುಟಗಳೆ,
ಸದಾ ಆನ್ ನಲ್ಲಿರುವ ಟೇಪ್ ರೆಕಾರ್ಡರ್.....
ಉಳಿದವರೊಂದಸ್ಟು ಜನ ಮೌನಿ ಬಾಬಾಗಳಾಗಿ ಮುರುಕು ಬೆನ್ನಿಗಂಟಿ
ಪಿಳಪಿಳ ಕಣ್ಣುಗಳ ಮಬ್ಬಾಗಿಸಿ ಮಿಕ್ಕವರು ಕೊಟ್ಟಿದ್ದನ್ನ ಸ್ವೀಕರಿಸಿ ಕೂತ ಜಾಗ ಬಿಟ್ಟುಕೊಡದವರು
ಇನ್ನೊಂದಸ್ಟು ಜನ ಸಿಟ್ಟಿನ ಅಪರಾವತಾರಗಳೆ
ಹೀಗಿದ್ದರು ಇವರು
ನಮಗಾತ್ಮೀಯರು, ಪ್ರತಿ ನಿಮಿಶವೂ ನಮ್ಮನ್ನ ಅವರತ್ತ ಸೆಳೆಯುವವರು
ಒಂದು ಸರ್ತಿಗೆ ಕರ್ಕೊಂಬಿಡಪ್ಪಾ ಬೇಗ ಎಂದು ಅವರಿಗಿಂತ
ಮೊದಲೆ ನಾವೇ ಬೇಡಿದರು ಮರುಗಳಿಗೆ
ಸವಿನೆನಪುಗಳ ನೆನೆದು ಕಣ್ಣೀರು ಒತ್ತರಿಸುವವರು
ನೆನೆ ನೆನೆದು ಮುಂದೆ ನಮ್ಮ ಟಾರ್ಗೆಟ್ಟು

Thursday, June 12, 2008

ಬುದ್ಧಿವಂತರು.....?

ಯಾರ ಅಪ್ಪಣೆಯನ್ನೂ ಪಡೆಯದ ಗುಂಡು ......? ಹುಡುಕಿದ್ದು ಬಡ
ರೈತನೆದೆಯನ್ನು
ರಾಜಕೀಯದವರು ಅವಕಾಶ ಹುಡುಕಿದ್ದು ಹೆಪ್ಪುಗಟ್ಟಿದ ರಕ್ತದಲ್ಲಿ
ಭವಿಶ್ಯದ ಮೋಡ ಬಿತ್ತಿದ್ದು ಅದರಲ್ಲೆ......
ಒಂದಶ್ಟು ಜನ ತಮ್ಮ ಪಾರ್ಟಿ ದ್ವಜ ಹಿಡಿದು ಇನ್ನೊಂದಶ್ಟು ಜನ ಮುಂದೆ ಬಿಟ್ಟು
ಸಿದ್ದರಿದ್ದೇವೆ ಈಗ ಚಲಾಯ್ಸಿ ಗುಂಡು ಅಂದರು....
ಸರಕಾರ ಇನ್ನು ಮುಂದೆ ರಕ್ತ ಹೀರೋ ಗುಂಡುಇಲ್ಲ
ನೋವು ಕೊಡೊ ಬರೇ ರಬ್ಬರ್ ಗುಂಡು ಅಂದಿತು........
ಅವರೂ ಉಳಿದರು ಇವರೂ ಬದುಕಿದರು......
ಸಮಸ್ಯೆ ಪರಿಹಾರಕ್ಕೆಂದೇ ಇದೆ ವಿಧಾನ ಸೌಧ
ಅಲ್ಲಿ ಇವರಿಗೆಲ್ಲ ಕೂರೋಕೂ ವ್ಯವದಾನವಿಲ್ಲ
ಚರ್ಚೆಗೂ ಆಸ್ಪದವಿಲ್ಲ....ರಾಜಕೀಯ ಏನಿದ್ದರೂ ಸೀಟಿಗಾಗಿ ಮಾತ್ರ
ಇವತ್ತೋ ನಾಳೆಯೋ ಅನ್ನುವವನು ಕೂಡ ಗದ್ದಲ ಮಾಡುವವನೆ......
ನಿರ್ಣಯಗಳ ಪ್ರತಿ ತೂರುವವನೆ....ಓಟು ಕೊಟ್ಟವನು ಮತಿಹೀನನೆ ....
ಓಟಿನ ಬೆಲೆ ಮರೆತವನು ನೀತಿಹೀನನೆ.....?
ರಾಜಕೀಯ.......
ಭೂಮಿ ಭಗಿದೆದ್ದ ಧೂಳೊಳಗಿನ ಒಳ ಒಪ್ಪಂದಗಳ ಕೂಪವಸ್ಟೆ
ಹಿಂದಿನವರು ಬಚ್ಚಿಟ್ಟ ಅಕ್ರಮಗಳ ಸಕ್ರಮ ನೋಟದ ರಾಜಿ ಸೂತ್ರವಸ್ಟೆ
ಇಲ್ಲಿ ಎಲ್ಲರು ಭಗ್ನ ಮತ್ತು ನಗ್ನ ಪ್ರೇಮಿಗಳೇ.......
ಕೈ ಕತ್ತರಿಸಿಕೊಂಡರೂ ತಬ್ಬುವಾಸೆಯವರೆ......ಸಿಗಿದ ಹ್ರದಯದಲ್ಲಿ ನೊಣ ಕೂತಿದ್ದರು
ವಿಶ್ವಾಸಾರ್ಹತೆಯ........? ಪ್ರತೀಕಗಳೆ
ಇವರಲ್ಲಿ ಯಾರು ಹಿತವರೋ ನಿನಗೆ.....ಹೇಳು ರೈತ.
ಗೊತ್ತೋ ಅವರಿಗೆಲ್ಲ ಸತ್ತವನ ರಕ್ತ ತೊಳಿಯೋಕೆ ......ಬರಗಾಲವಿದ್ದರೂ
ಐದು ವರುಶಕ್ಕೊಂದು ಬಾರಿ ಖಂಡಿತ
ಮಳೆ ಬರುವುದೆಂದು.......
ಅದು ನಿನ್ನ ನೆನಪನ್ನೂ ತೊಳೆದು ಬಿಡುತ್ತದೆ
ಸ್ವಂತಿಕೆಯನ್ನೂ ಕೊಂಡು ಬಿಡುತ್ತದೆ.

ಪ್ರಶ್ನೆಗಳು

ಪ್ರೀತಿ ಎಲ್ಲಿದೆ....ಅದು
ಹೇಗಿದೆ......?
ತುಟಿಯಂಚಿನ ಜೇನ ಹನಿ ಅದು ಅಂತಾರೆ
ಹಾಗಿದ್ದರೆ ಸವಿದು ಸವಿದು ಅವನ ಅಥವ ಅವಳ
ತುಟಿ ಯಾಕೆ ಸವೆಯಲಿಲ್ಲ........?
ಪ್ರೀತಿ ಕುರೂಪವಾಗಬಾರದೆಂದೋ .....ಪ್ರೀತಿ
ರಕ್ತಹರಿಸಬಾರದೆಂದೋ.......?
ಪ್ರೀತಿ ಕಣ್ಣಂಚಿನ ಕುಡಿನೋಟದಲ್ಲಿ ಅಂತಾರೆ
ಹಾಗಿದ್ದರೆ ಕಣ್ಣಂಚು ಆ ಬೆಳಕಿಗೆ ಉರಿದುರಿದು
ಕಣ್ರೆಪ್ಪೆ ಮುರಿಯಲಿಲ್ಲ ಏಕೆ........?
ಮತ್ತಸ್ಟೂ ಪ್ರೀತಿ ಕತೆಗಳ ಗಂಟನ್ನು ಇನ್ನಸ್ಟೂ ಕೂಡಿಟ್ಟುಕೊಳ್ಳಲೆಂದೇ......?
ನಿಜ ಹೇಳಿ ಪ್ರೀತಿ ಇರೋದು ......ತೆರೆದೆದೆಯ ಹುಡುಗರಲ್ಲೋ
ಅರೆ ಕದ್ದಿಟ್ಟ ಹುಡುಗಿಯರೆದೆಯಲ್ಲೋ.......?
ಒಂದಂತು ಸತ್ಯ ಇಬ್ಬರ ಕಳ್ಳ ನೋಟವಂತು......
ಅರೆ ತೆರೆದ ಲೋ ವೇಸ್ಟ್ ಮೇಲೆ.........

Sunday, June 8, 2008

ಬತ್ತಿದೆ

ಶುದ್ದಪ್ರೇಮಪತ್ರ ಬರಿಬೇಕೆಂದವನ ಊರಲ್ಲಿ ಒಂದು ಹನಿಮಳೆಯನ್ನೂ ಬಿತ್ತಲಿಲ್ಲ ಆಕಾಶ
ವಿರಹಪತ್ರ ಬರಿಬೇಕೆಂದವನ ಊರಲ್ಲಿ ಕೆರೆಯು ಬತ್ತಲಿಲ್ಲ ಮರವು ಬೆತ್ತಲಾಗಲಿಲ್ಲ
ಇದಾವುದರ ಪರಿವೆ ಇಲ್ಲದ ...... ಬೆವರು ಸುರಿಸೋದೆ ತನ್ನ ಕರ್ಮ....ಏನು ಬೆಳೆಯೋದು ಎಂದು
ಯೋಚಿಸುವ ರೈತನಿಗೆ .....ಬಿತ್ತೋಕೆ ಬೀಜವು ಇಲ್ಲ ಉಣಿಸೋಕೆ ರಸಗೊಬ್ಬರವೂ ಇಲ್ಲ
ಅವನ ಬದುಕುವ ಆಸೆ ಹೇಳುವ ಬರಹಕ್ಕೆ ಪೆನ್ನೇಇಲ್ಲ.....
ಇದ್ದುದರಲ್ಲಿಯು ಶಾಯಿಬತ್ತಿದೆ ಅದಕ್ಕೂ ಬೇಜಾರು ಎಂದೋ ಸಾಲದ ಸಹಿಗಾಗಿ ಮಾತ್ರ ನನ್ನ ಮುಟ್ಟಿದ್ದೆ ಎಂದು
ಈಗವನಲ್ಲಿ ಇರುವುದೊಂದೇ ಶಾಲು ...ಅದೂ ಊರ ಅಂಗಡಿಯಿಂದ ಸಾಲ ತಂದಿದ್ದು
ಅದು ತನ್ನ ಬೆವರೊರಸಲೂ ಸಾಲುತ್ತಿಲ್ಲ ,ಮನೆಯವರ ಕಣ್ಣೊರೆಸಲೂ ಇಲ್ಲ
ಸೋತು
ಎದೆಗೆ ಹಾಸಿ ಬಯಲಲ್ಲಿ ಮಲಗಿದರು ರಕ್ತ ಆವಿಯಾಗಿ ಎದ್ದೆದ್ದು ಕಾಣುವ
ಗೂಡೂ ಮುಚ್ಚಲಿಲ್ಲ.....

Saturday, June 7, 2008

ಏನರ್ಥ

ಆಣೆ ಮೀನ್ಸ್ ಎಲಿಫೆಂಟ್ ಎಂದು ಕೇಳಿದ್ದಳು ಒಂದು ದಿನ ನಟಿ
ಮರುದಿನ ಗೀಚಿದ್ದು ನಾಲ್ಕೈದು ಅಭಿಮಾನಿಗಳಿಗೆ,ಬೇಜಾರಾಗಬಾರದೆಂದು
ಅಟೋಗ್ರಾಫ್.......ಜನ ತುಂಬಾ ಚೆನ್ನಾಗಿ ಮಾಡ್ತೀರಪ್ಪ ಅಂದ್ರು
ನಟಿ ನಾಯಕಿಯಾದ್ಲು.....
ಮರುದಿನ ಸೆಟ್ಟಿಗೆ ಬಂದವಳೇ ಡಯಲಾಗ್ ಶೀಟ್ ಪ್ಲೀಸ್ ಅಂದ್ಲು
ಕಣ್ಣಾಡಿಸಿದವಳೆ ,ನಿರ್ದೇಶಕರಿಗೆ ಸಾರ್ ಡಯಲಾಗ್ನಲ್ಲಿ ಪೆಪ್ಪೇ ಇಲ್ಲ ಅಂದ್ಲು
ಉಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸಪ್ಪ.
ಹೀಗೆ ........ಟೈಮ್ ಪಾಸ್ಗೆ ಎಮ್ಮೆಲ್ಲೆ ಆದೋನು
ಅಲ್ಲು ಹೊಡಿತಾನೆ ಗೊರ್ಕೆ ....ಯಾಕ್ ಗೊತ್ತಾ ವಿಧಾನ ಸೌಧದೊಳಗೆ ಇರೋ ಮಹಿಳಾಮೀಸಲಾತಿಯಯ
ಐದು ಪರ್ಸೆಂಟೂ ಹೆಣ್ಮಕ್ಳಿಲ್ಲ ಒಳ್ಗಡೆ ಇರೋರೂ ವಯಸ್ಸಾದ ಹೆಂಗಸರೇ
ಅದಕ್ಕೆ ಈ ನಾಯಕನಿಗೂ ಪೆಪ್ಪಿಲ್ಲ
ಮತಿ ಮರೆತರೂ ಈತ ಜನ ನಾಯಕ......ಇರುವಿಕೆಯ ತೋರ್ಪಡಿಸುವಿಕೆಗೆ
ಸರಿ ತಪ್ಪುಗಳ ವಿವೇಚನೆ ಇಲ್ಲದ ಅರಚಾಟ ಕಿರುಚಾಟಗಳ
ಅನರ್ಥ

Friday, June 6, 2008

ಗೊತ್ತಿಲ್ಲಾ.....?

ನೆನಪಿದೆಯಾ......
ಇಲ್ಲ ಎಲ್ಲೋ ಕೇಳಿಸಿಕೊಂಡ ನೂರಾರು ದ್ವನಿಗಳಲ್ಲಿ ಯಾವುದೋ ಒಂದು
ಹೇಗೆ ಹೇಳಲಿ ಅದು ನೀನೇ ಎಂದು
ಕಾಲಗತಿಯಲ್ಲಿ ಮನಸೇ ಮುಸುಕು ಹೊದ್ದಂತೆ ಎಲ್ಲೋ ಹೂತಂತೆ
ದ್ವನಿಯುಕೂಡ
ನಿನ್ನ ವಯಸ್ಸಂತೆ ಏರಿರಬಹುದು
ಕಳಕೊಂಡ ನಿನ್ನ ರೂಪದಂತೆ
ಈಗ ನನ್ನದೂ ಸತ್ವವಿಲ್ಲದ ಗೂನು ಬೆನ್ನು
ಅದಕ್ಕೆ ನಿನ್ನ ನೆನಪಾದರೂ ಯಾಕೆ?