ಬುದ್ಧಿವಂತರು.....?
ಯಾರ ಅಪ್ಪಣೆಯನ್ನೂ ಪಡೆಯದ ಗುಂಡು ......? ಹುಡುಕಿದ್ದು ಬಡ
ರೈತನೆದೆಯನ್ನು
ರಾಜಕೀಯದವರು ಅವಕಾಶ ಹುಡುಕಿದ್ದು ಹೆಪ್ಪುಗಟ್ಟಿದ ರಕ್ತದಲ್ಲಿ
ಭವಿಶ್ಯದ ಮೋಡ ಬಿತ್ತಿದ್ದು ಅದರಲ್ಲೆ......
ಒಂದಶ್ಟು ಜನ ತಮ್ಮ ಪಾರ್ಟಿ ದ್ವಜ ಹಿಡಿದು ಇನ್ನೊಂದಶ್ಟು ಜನ ಮುಂದೆ ಬಿಟ್ಟು
ಸಿದ್ದರಿದ್ದೇವೆ ಈಗ ಚಲಾಯ್ಸಿ ಗುಂಡು ಅಂದರು....
ಸರಕಾರ ಇನ್ನು ಮುಂದೆ ರಕ್ತ ಹೀರೋ ಗುಂಡುಇಲ್ಲ
ನೋವು ಕೊಡೊ ಬರೇ ರಬ್ಬರ್ ಗುಂಡು ಅಂದಿತು........
ಅವರೂ ಉಳಿದರು ಇವರೂ ಬದುಕಿದರು......
ಸಮಸ್ಯೆ ಪರಿಹಾರಕ್ಕೆಂದೇ ಇದೆ ವಿಧಾನ ಸೌಧ
ಅಲ್ಲಿ ಇವರಿಗೆಲ್ಲ ಕೂರೋಕೂ ವ್ಯವದಾನವಿಲ್ಲ
ಚರ್ಚೆಗೂ ಆಸ್ಪದವಿಲ್ಲ....ರಾಜಕೀಯ ಏನಿದ್ದರೂ ಸೀಟಿಗಾಗಿ ಮಾತ್ರ
ಇವತ್ತೋ ನಾಳೆಯೋ ಅನ್ನುವವನು ಕೂಡ ಗದ್ದಲ ಮಾಡುವವನೆ......
ನಿರ್ಣಯಗಳ ಪ್ರತಿ ತೂರುವವನೆ....ಓಟು ಕೊಟ್ಟವನು ಮತಿಹೀನನೆ ....
ಓಟಿನ ಬೆಲೆ ಮರೆತವನು ನೀತಿಹೀನನೆ.....?
ರಾಜಕೀಯ.......
ಭೂಮಿ ಭಗಿದೆದ್ದ ಧೂಳೊಳಗಿನ ಒಳ ಒಪ್ಪಂದಗಳ ಕೂಪವಸ್ಟೆ
ಹಿಂದಿನವರು ಬಚ್ಚಿಟ್ಟ ಅಕ್ರಮಗಳ ಸಕ್ರಮ ನೋಟದ ರಾಜಿ ಸೂತ್ರವಸ್ಟೆ
ಇಲ್ಲಿ ಎಲ್ಲರು ಭಗ್ನ ಮತ್ತು ನಗ್ನ ಪ್ರೇಮಿಗಳೇ.......
ಕೈ ಕತ್ತರಿಸಿಕೊಂಡರೂ ತಬ್ಬುವಾಸೆಯವರೆ......ಸಿಗಿದ ಹ್ರದಯದಲ್ಲಿ ನೊಣ ಕೂತಿದ್ದರು
ವಿಶ್ವಾಸಾರ್ಹತೆಯ........? ಪ್ರತೀಕಗಳೆ
ಇವರಲ್ಲಿ ಯಾರು ಹಿತವರೋ ನಿನಗೆ.....ಹೇಳು ರೈತ.
ಗೊತ್ತೋ ಅವರಿಗೆಲ್ಲ ಸತ್ತವನ ರಕ್ತ ತೊಳಿಯೋಕೆ ......ಬರಗಾಲವಿದ್ದರೂ
ಐದು ವರುಶಕ್ಕೊಂದು ಬಾರಿ ಖಂಡಿತ
ಮಳೆ ಬರುವುದೆಂದು.......
ಅದು ನಿನ್ನ ನೆನಪನ್ನೂ ತೊಳೆದು ಬಿಡುತ್ತದೆ
ಸ್ವಂತಿಕೆಯನ್ನೂ ಕೊಂಡು ಬಿಡುತ್ತದೆ.
0 Comments:
Post a Comment
Subscribe to Post Comments [Atom]
<< Home