Monday, February 16, 2009

ಗೆಳತಿ ೪

ನೀನು ಕಡೆದಿಟ್ಟ ಬೆಣ್ಣೆ ತಿನ್ನಲು ಬಂದವನು
ನಾನೆಂದು ನೀ ಬಾಯಿ ಬಿಡಬೇಡ ನಿನ್ನ ಗೆಳತಿಯ ಬಳಿ
ಅವಗಿಂತ ನಿನ್ನ ಕೈಯ್ಯೇ ಮಿಗಿಲು...
ಅವಳಿಗೀಗ ಹರೆಯ ದಾಟಿದ ಶಕ್ತಿ
ಅದಕ್ಕೆ ಸರಿಯಾಗಿ ಕಡೆಯಲು ಬರುತ್ತಿಲ್ಲ
ಹಾಗಿದ್ದರೆ ನಾನೆಷ್ಟನೆಯವಳೆಂದು ಕೇಳಬೇಡ
ಹದಿನಾರರ ತವಕದಲ್ಲಿ
ಹಗಲು ರಾತ್ರಿ ಪಾಳಿ ನಂದು
ಕೃಷ್ಣ...ಕೃಷ್ಣಾ...

ಗೆಳತಿ ೩

ನಿನಗೆ ಕೃಷ್ಣ ಕೊಟ್ಟ ಮುತ್ತೆಷ್ಟು ಗೊತ್ತ.... ಅವನ ಒಂದು
ಮುತ್ತಿಗೇ ಮತ್ತೇರಿ ಬಿದ್ದವರೇ ಜಾಸ್ತಿ
ನೀನು ಸುಳ್ಳು ಹೆಳುವ ಹಾಗೆ ಇಲ್ಲ
ನನ್ನ ಬಗ್ಗೆ ನನಗೊತ್ತಿಲ್ವಾ...
ಹಾಗೆಂದು ಮಾತಲ್ಲೆ ಮತ್ತು ಬರಿಸಿದಾತ ತನಗೆಷ್ಟು ಬೇಕೋ
ಅಷ್ಟು ಕೊಟ್ಟು ...ಅಷ್ಟೇ ಕದ್ದು ಹೋಗಿದ್ದು ನಿನಗೊತ್ತೇ ಆಗಲಿಲ್ಲ....
ಇನ್ನಾದರೂ ಸತಯಿಸಬೇಡ ನಾ ಒಪ್ಪೋದೇ ಇಷ್ಟಕ್ಕೇ ಎಂದು...
ಕಳ್ಳಿ...ನಾನಲ್ಲ ಕಳ್ಳ ...ಇಂತೀ ನಿನ್ನ ನಲ್ಲ

Sunday, February 15, 2009

ಗೆಳತಿ ೨

ಎಲೆಯ ಮೇಲೆ ಕುಳಿತ ಹನಿಯ ಬಗ್ಗೆ
ನನಗ್ಯಾತರ ಹಂಗು... ಆದರೂ
ಅಕ್ಷಿಪಟಲದಲ್ಲಿ ನೀನ್ಯಾಕೆ ಸ್ಥಿರ ಇನ್ನೂ ಸ್ಥಿರ
ನನಗಾಗಿ ಬಿಟ್ಟು ಇಟ್ಟು ಹೋದ ಸವಿ ನೆನಪೆ
ಅವಳು...
ಹಾಗಿದ್ದರೆ ನೀನೂ ಹದಿನಾರರ ಹಂಗಿನ ಇಬ್ಬನಿ
ಹೆಸರವಳೆ...

ಗೆಳತಿ ೧

ನೀನ್ಯಾರೋ ಗೊತ್ತಿಲ್ಲ
ಆದರೂ ನೀನನ್ನ ಬಯಸುತ್ತೀ ಎಂದು ಗೊತ್ತು
ಯಾಕಂದ್ರೆ ನನ್ನ ಜಾತಕದಲ್ಲಿ ನನ್ನ ನಕ್ಷತ್ರ ರೋಹಿಣಿ
ಈ ಪ್ರಾಪ್ತಿಯಿಂದಾಗಿ ನಾನು ಕೃಶ್ಣಾವತಾರ.
ಹದಿಹದಿನಾರರ...
ಓಟದಲ್ಲಿ ನೀನೂ ಒಬ್ಬಳು-ಗೊತ್ತು
ನಿನಗೆ ಗೊತ್ತಿಲ್ಲದಿದ್ದರೆ ನನ್ನ ತಪ್ಪಲ್ಲ.

ಹದಿಹರೆಯದ ಹದಿನಾರು ಸಾವಿರ ಗೆಳತಿಯರು

ನಾನ್ಯಾಕೆ ನಿನ್ನನ್ನ ಕೃಷ್ಣಾರ್ಪಣ ಮಾಡಲಿ ವರಿಸುವ ದಿನದಂದೇ ಗೆಳತಿ
ಕೃಷ್ಣನನ್ನು ಸೇರಬೇಕೆಂದ ಋಷಿ ವಂಶ ನೀನಾ...
ಹೀಗೆ ಬಯಸಿದವರ ಕುರಿತಾಗಿ ಚಿಂತಿಸುತ್ತಾ ನನ್ನ ಮನದಂಗಳದಲ್ಲಿ
ಓಡಾಡಿದ ಆ ಮಾರು(ಮರು)ವೇಷ ಪುರುಷಿಯರ ಕುರಿತಾಗಿ ತೋಚಿದ ಸಾಲುಗಳು ಇವು...
ರಾತ್ರಿ ಪಯಣಿಸುವಾಗ ಕದ್ದು ಮರಮೋಡಗಳ ಮಧ್ಯೆ ಇಣುಕುವ ಚಂದಿರ
ಅಲ್ಲಲ್ಲಿ (ಹಾರಿ)ಹರಿ ಬಿಟ್ಟ ಕೃಷ್ಣ ದೋಚಿದ ಸೀರೆಗಳ ಕಂಡು ಮುಸಿಮುಸಿ ನಕ್ಕ ಹಾಗೆ
ಯಾಕೆ ಕಾಣಿಸುತ್ತಾನೋ...
ಬೆತ್ತಲಾದ ನಂತರ ನಿನ್ನ ಅರೆಸತ್ಯದ ಕಚಗುಳಿ ಇರಬೇಕೇನೋ...