Saturday, September 20, 2008

ಎಲ್ಲವನ್ನು ಪ್ರಾಪ್ತಿಸಿಕೊಂಡ ಅಪ್ರಾಪ್ತರು

ಡೊಂಕುಬಾಲದ ನಾಯಕರೆ ನೀವೇನೂಟವಾ ಮಾಡುವಿರಿ.......
ಹಾಗಿರುವವರಿಗೆ ಹೊಂದಿಸಿದ್ಧ ಈ ಸಾಲುಗಳು ಇವತ್ತು ಹೀಗೂ ಆಗುವ ದಾರಿ ಹಿಡಿದಿದೆ.
ಅಲ್ಪಬುದ್ಧಿಯ ಬುದ್ಧಿಜೀವಿಗಳೆ (ಕೆಲ)ನೀವೇನೂಟವಾ ಮಾಡುವಿರಿ.......
ಯಾಕ್ರೀ ನೀವುಗಳು ಹೀಗಾಗುತ್ತಿದ್ದೀರಿ.ಲೋಕದ ಡೊಂಕನ್ನು ತಿದ್ದುವಂತಹ ಕಾರ್ಯ ನಿಮ್ಮಿಂದ ಆಗದೇ ಹೋದರು ಕೊನೆಪಕ್ಷ ಡೊಂಕನ್ನು ಎತ್ತಿತೋರಿಸಿ ಅದು ನಿಷ್ಪಕ್ಷವಾಗಿ.ನಿಮ್ಮ ಕಣ್ಣಿಗೂ ರಾಜಕಾರಿಣಿಯಂತ ಪೊರೆ ಯಾಕ್ಬಂತೋ....ಅದೆಷ್ಟು ಮಾನಹೀನರಾಗಿ ಧರ್ಮಗಳ ವಿಚಾರವಾಗಿ ಬಾಯಿಗೆ ಬಂದಂತೆ ಒದರುತ್ತೀರಿ.ವಿವೇಚನೆಯನ್ನು ಯಾವ ಶರಾಬು ಅಂಗಡಿಯಲ್ಲಿ ಗಿರವಿ ಇಟ್ಟುಬಿಟ್ಟಿದ್ದೀರಿ......ಮರುಕದೊಂದಿಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ.ನೀವುಗಳೆಲ್ಲ ಯಾಕೆ ಹೀಗಾಡ್ತಿದ್ದೀರಿ.....ನಿಮ್ಮನ್ನು ಗುತ್ತಿಗೆಗೆ ಹಾಕಿಕೊಂಡವರು ನಿಮಗೆಷ್ಟು ಡಾಲರ್ ಬೆಲೆ ಕಟ್ಟಿರಬಹುದು.ನಾಡಿನ ಶ್ರೇಷ್ಟರಲ್ಲಿ ನಿಮ್ಮನ್ನು ಕಂಡ ಕಣ್ಮನಸುಗಳು ಬಹುಶ ಅದೆಷ್ಟು ಪಾಪ ಮಾಡಿದ್ವೋ.....ಮನಸ್ಸಿನಿಂದ ಕಿತ್ತುಹಾಕಲಾಗದೆ ಒಳಗೆ ಸೇರಿಸಿಕೊಳ್ಳಲಾಗದೆ ಡೊಂಕುಬಾಲದವರಾಗಿ ಇವರು ವಾಸನೆಯತ್ತ ಓಡುತ್ತಿದ್ದಾರಲ್ಲ (ವಿವೇಚನೆಯಿಂದ ಮುಕ್ತಿ)ನಮ್ಮನ್ನು ನಾವೆ ಶಪಿಸಿಕೊಳ್ಳಬೇಕಷ್ಟೆ.
ಸಾರ್ವಜನಿಕವಾಗಿ ಮನ್ನಣೆ ಪಡೆವವ್ಯಕ್ತಿಯಾದ ನಂತರ ಯಾರ ಪರವೂ ನಿಲ್ಲದೆ ನಿಷ್ಟುರವಾದಕ್ಕೆ ಅಂಟಿಕೊಂಡಿರಬೇಕಾದುದು ಧರ್ಮ,ಅದರ ಬದಲಾಗಿ ನಾನು ಮತಾಂತರಗೊಳ್ಳುತ್ತೇನೆ ಯಾವನು ತಡೆಯುತ್ತಾನೆ ನೋಡೋಣ ಅಂತ ಪೊರ್ಕಿ ಷ್ಟೈಲ್ನಲ್ಲಿ ಮೀಡಿಯಾದ ಮುಂದೆ ಅರಚಾಡ್ತೀರಲ್ಲ.......ಟಿವಿ ನೋಡ್ತಿದ್ರೆ ಟಿವಿಯಿಂದಲೇ ಮನೆತುಂಬ ಗಬ್ಬು ವಾಸನೆ ಬುರುವುದಕ್ಕೆ ಶುರುವಾಗಿ ವಾಂತಿ ಬರುವ ಹಾಗಾಯಿತು.ನಿಮ್ಮಂತಹವರಾದ್ರು ಸಮಾಜದ ಕಣ್ಣುಗಳಾಗಬೇಕು.ನೀವೇ ಮಚ್ಚು ಲಾಂಗು ಹಿಡಿಸುವಂತ ಪ್ರೇರಕರಾಗಬಾರದು.ಅಶಾಂತಿ ಉಂಟಾದಲ್ಲಿ ರಾಜಿಮಾಡಿಸಿ ತಪ್ಪು ಮಾಡಬಾರದ ಹಾಗೆ ಬುದ್ಧಿ ಹೇಳಿ.....ನೀವೇ ಬುದ್ಧಿಹೀನರಾಗಬೇಡಿ.ಸ್ವಾಸ್ಥ್ಯ ಕೆಡಿಸಲು ನಮ್ಮ ದೇಶದಲ್ಲಿ ಬೇಕಾದ್ದಕ್ಕಿಂತ ಹೆಚ್ಚೇ ಕೊಚ್ಚೆಗಳಿದೆ(ದ್ದಾರೆ).
ನಿಮ್ಮಂತಹವರ ಮಕ್ಕಳಿಗೆ ಸಾಧಾರಣ ಚಾಕಲೇಟು ತಿಪ್ಪೆಗೆಸೆಯುವ ವಸ್ತುವಾಗಬಹುದು........ಅದೇ ವಾರಕ್ಕೊಂದು ಐವತ್ತು ಪೈಸೆಯ ಚಾಕಲೇಟು ತಿನ್ನುವ ಮಗುವಿನ ಮನೆಗೆಬಂದು ನೀವು ಚಾಕಲೇಟು ತೋರಿಸಿ ಆ ಬಡವರ ಕಣ್ಣಲ್ಲಿ ತುಂಬ ದೊಡ್ಡವರಾಗಿ ಕಾಣುತ್ತೀರಿ ಆ ಮಗುವನ್ನು ಆಸೆಗೀಡು ಮಾಡುವ ಮುಖಾಂತರ ನೀವು ನಿರಾಯಾಸವಾಗಿ ಲಪಟಾಯಿಸಬಹುದು.....ನೀವು ದೊಡ್ಡವರು ನಿಮ್ಮಲ್ಲಿ ಡಾಲರ್ ರುಚಿಯ ದುಡ್ಡಿರುತ್ತದೆ ಫಾರಿನ್ ಚಾಕಲೇಟನ್ನ ತೊಗೊಂಡು ಹೋದ್ರಿ ಅಂತ ಇಟ್ಟುಕೊಳ್ಳಿ.....ಅದ್ಭುತವಾದ ರುಚಿತೋರಿಸಿ ಅಪ್ಪಾಮ್ಮನಿಗೆ ಗೊತ್ತಿಲ್ಲದಂತೆ ಅಲ್ಲ ಬೇಡ ಬೇಡ ಎಂದು ಗೋಗೊರೆಯುತ್ತಿರುವವರ ಎದುರೇ ಆ ಮನೆಯ ಕರುಳಬಳ್ಳಿಯನ್ನು ನೀವು ಕದಿಯಬಹುದು.ಇದು ದ್ರೋಹ ಅಲ್ಲವೇ ಮಹನೀಯರೆ. ಆದರೆ ನಿಮ್ಮನ್ನು ಹಿಡಿಯುವವರಿಲ್ಲ.ನಿಮ್ಮ ಹಿಂದೆ ಡಾಲರ್ ಹಾಗು ಮತಿಗೆಟ್ಟ ಕೆಲ ನಾಯಕರಿರುತ್ತಾರೆ ಅವರು ನಿಮ್ಮನ್ನು ರಕ್ಷಿಸುತ್ತಾರೆ....ನಿಮಗೂ ಅವರು ಬೇಕಾಗುತ್ತಾರೆ ಈ ರೀತಿ ಪುಂಗಿ ಊದೋದ್ರಿಂದ ನಿಮಗೀಗಿರೋ ಪೀಟದೊಂದಿಗೆ ಇನ್ನೊಂದೇನಾದ್ರು ಸಿಗಬಹುದು.ಕೆಲಸರ್ತಿ ನಮ್ಮನ್ನಾಳುವ ನಾಯಕರಿಗೂ ಬಾಯಿತುಂಬ ಹೆಂಡದವಾಸನೆ ಬರುವ ಬುದ್ದಿವಂತ ದೊಡ್ಡವ್ಯಕ್ತಿಗಳು ಬೇಕಾಗುತ್ತಾರೆ.ನೀವುಗಳು ದಾಸಯ್ಯನ ಶಂಖವಾಗ್ತೀರ ಆ ಶಂಖದೊಳಗಡೆ ಅಸಹ್ಯ ಉಗುಳು.....ನಿಮ್ಮ ಜೋಳಿಗೆಯ ತುಂಬ ಶುದ್ಧೀಕರಣ ದ್ರಾವಣ ಇರಲಿ ರೋಗರುಜಿನ ಹರಡುವ ಕಲ್ಮಶ ಬೇಡ ಪ್ಲೀಸ್ .
ಬುದ್ಧಿಗೇಡಿಗಳೆಂದು ಕೆಲವರನ್ನು ನಿಂದಿಸುವಾಗ ಬುದ್ಧಿಜೀವಿಗಳೆನಿಸಿಕೊಂಡ ನೀವುಗಳು ನಿಮ್ಮ ಬುದ್ಧಿಯನ್ನು ಹೊಲಸು ಮೋರಿಯಾಚೆ ತೆರೆದಿಡಬೇಡಿ.
ಇನ್ನೊಬ್ಬರು ಮಹಾನುಭಾವರು ಒಂದು ಹೇಳಿಕೆ ಕೊಡುತ್ತಾರೆ.ಎಲ್ಲರನ್ನು ಮೀರಿಸುವಂತೆ, ಪ್ರಪಂಚಕ್ಕೆ ಮತಾಂತರ ನಮ್ಮ ದೇಶದ ಮಹಾನ್ ಕೊಡುಗೆಯಂತೆ.....ಈವರಾಡುವ ಮಾತಿಗೆ ಇವರನ್ನು ಸ್ವರೇಪಿಸ್ಟ್ ಅನ್ನಬೇಕಷ್ಟೆ.ಇಂತಹವರಿಂದಾಗಿ ಸಮಾಜದ ಸ್ವಾಸ್ಥ್ಯಕ್ಕೆ ಏಡ್ಸ್ ತಗುಲದಿರಲಿ.ನಿಮಗೆಲ್ಲ ಅಪ್ರಾಪ್ತ ಮಾತು ಮೈತುನದ ಚಟವಿರಬಹುದು ......ಆದರು ಪ್ಲೀಸ್ ನೀವು ನಿಮ್ಮಚಟಕ್ಕೆ ಕಾಂಡೋಮ್ ಬಳಸುವುದೊಳಿತು.

Tuesday, September 16, 2008

ಪ್ರಾರ್ಥಿಸಿ

ಅಯೋಮಯ.....
ಏನಾಗಿದೆ ನಮಗೆಲ್ಲ.....ಅದರಲ್ಲು ನಮ್ಮ ಮುಂದಾಳುಗಳಿಗೆ....ಇಂಥಹವರಿಂದ ಮೇರಾ ಭಾರತ್ ಮಹಾನ್ ಆಗಲು ಸಾಧ್ಯವಿದೆಯೆ?
ಎಲ್ಲೆಲ್ಲು ಗಲಭೆಗಳು,ಕೋಮುದಳ್ಳುರಿಗಳು.ಒರಿಸ್ಸದಲ್ಲಿ ಹಿಂದು ಸ್ವಾಮೀಜಿಯನ್ನ ಗುಂಡಿಟ್ಟು ಕೊಲ್ಲಲಾಯಿತು.ನಮ್ಮ ನಾಯಕರಾರೂ ಎಚ್ಚೆತ್ತುಕೊಳ್ಳಲಿಲ್ಲ ಹಿಂದೂ ಸ್ವಾಮೀಜಿ ತಾನೆ ಲೆಕ್ಕಕ್ಕೆ ಸಿಗಲಾರದಷ್ಟು ಜನ ದೇಶದಲ್ಲಿ ಅಂಥಹವರು ಸಿಗುತ್ತಾರೆ ಅಂದುಕೊಂಡರೇನೋ ಕೆಲವರು.....ಮೂರ್ಖತನದ ಪರಮಾವಧಿ.ಜನರ ಕೋಪ ಬೆಂಕಿಯ ರೂಪದಲ್ಲಿ ವ್ಯಕ್ತವಾಯಿತು.ಇದಕ್ಕೆಲ್ಲ ಕಾರಣಕರ್ತರಾಗಿ ನಿಲ್ಲುವವರು ಮತ್ತದೇ ನಮ್ಮನ್ನಾಳುವ ನಾವು ನಮ್ಮ ಬೆರಳನ್ನು ಇಂಕಲ್ಲಿ ಸುಟ್ಟುಕೊಂಡು ಆರಿಸಿಕಳಿಸಿದ ಮೂರ್ಖಶಿಖಾಮಣಿಗಳು.ಭಯೋತ್ಪಾದನೆಯನ್ನು ತಮ್ಮ ಕಣ್ಣೋಟದಂಚಿನ ದೂರದಲ್ಲಿ ನೋಡುತ್ತ ಅವರು ಹಾರಿಸುವ ಗುಂಡಿನ ಗಂಧಕದ ವಾಸನೆಯನ್ನು ಕುಳಿತಲ್ಲೆ ಸ್ವಾದಿಸುತ್ತ ನರಸತ್ತ ಹೇಳಿಕೆಗಳನ್ನು ಕೋಡುವುದರಲ್ಲೆ ಮಗ್ನರಾಗಿದ್ದಾರೆ.ಪಾರ್ಲಿಮೆಂಟ್ ಚಿಂದಿ ಮಾಡಲು ಬಂದವನಿಗೂ ಮತಾಧಾರಿತ ಬುದುಕುವ ವರ ಕೊಡುವ ಚಿಂತನೆ.ಯಾರನ್ನು ಸಂತೈಸಲು ಓಲೈಸಲು ಈ ನಾಟಕವೋ?ತಮ್ಮ ಪಕ್ಷ್ಯ ಬಿಟ್ಟರೆ ಬೇರೆಯವರೆಲ್ಲ ದೇಶವಾಳಲು ಅಯೋಗ್ಯರು ಅನ್ನುವವರೆ ಜಾಸ್ತಿಯಾಗಿದ್ದಾರೆ.ಮುಂದೊಮ್ಮೆ ದೇಶ ಒಡೆಯುವ ಸನ್ನಿವೇಶ ಸ್ರಷ್ಟಿಯಾದರೆ ಅದು ಈ ದೇಶದ ಸಾಮಾನ್ಯ ಜನರಿಂದ ಅಲ್ಲ ಅದು ಈ ದೇಶವನ್ನಾಳುವ ನಮ್ಮ ಮಹಾನ್ ನಾಯಕರಿಂದ,ಅವರ ದೂರದರ್ಷಿತ್ವ ಇಲ್ಲದ ಓಲೈಸುವಿಕೆಯ ಬುದ್ಧಿಭ್ರಮಣೆಯ ನಿರ್ಧಾರದಿಂದ.ಇಲ್ಲದೆ ಇದ್ದಲ್ಲಿ ಒರಿಸ್ಸಾದಲ್ಲಿ ಸ್ವಾಮೀಜಿ ಹತ್ಯೆಯನ್ನು ಖಂಡಿಸದೆ ಇದ್ದ (ಅ)ಪ್ರಭುದ್ದಿಗಳು ನಂತರದ ಗಲಾಟೆಯನ್ನು ಹಿಂದೂಗಳಿಂದಾಗಿ ದೇಶವೇ ಹೊತ್ತಿ ಉರಿಯಿತೇನೋ ಎಂಬಂತೆ ಪ್ರಚಾರ ಮಾಡುವಲ್ಲಿ ಯಶಸ್ವಿಯಾದರು.ಕ್ರಿಶ್ಚಿಯನ್ನರಿಗೆ ದೇಶದಲ್ಲಿ ಬದುಕುವುದು ಕಷ್ಟವಾಗಿದೆ ಅಂದರು ನಿಜವಾಗಿಯೂ ಒರಿಸ್ಸಾದಲ್ಲಿ ಇದಕ್ಕೆ ತದ್ವಿರುದ್ದವಾಗಿ ಹಿಂದೂ ಧರ್ಮವನ್ನೇ ಬಲಿಗೊಡಲು ಹವಣಿಸುತ್ತಿದ್ದ ಕ್ರಿಶ್ಚಿಯನ್ನರ ತಪ್ಪನ್ನು ಎತ್ತಿ ಹೇಳಲೇ ಇಲ್ಲ.ಎಲ್ಲರು ಓಟಿಗಾಗಿ ನಂಗಾನಾಚ್ ವಾಲಗಳೇ.ಕೆಲವು ಕಾಂಗ್ರೆಸಿಗರಂತು ಹಿಂದುತ್ವದ ವಿರುದ್ಧ ಮಾತಾಡಿದರೇನೆ ಸೋನಿಯಾ ಸೆರಗಂಚಿನ ಒಂದು ನೂಲಾದರು ತಮ್ಮ ಮೈಮೇಲೆ ಆಶೀರ್ವಾದಪೂರ್ವಕವಾಗಿ ಸಿಗಬಹುದೇನೋ ಎಂಬಂತೆ ತಲೆಕೆಟ್ಟವರ ಹಾಗೆ ಮಾತಾಡಲು ಶುರುವಿಟ್ಟರು.ಹಿಂದುತ್ವವನ್ನು ಕಾಪಾಡಲು ಯಾರಿಗು ಗುತ್ತಿಗೆ ಕೊಟ್ಟಿಲ್ಲ ಅಂದವರಿಗೆ ಕನಿಷ್ಟ ಪಕ್ಷ್ಯ ಕ್ರಿಶ್ಚಿಯನ್ನರಿಗೆ ಈ ರೀತಿ ಗಲಾಟೆಯಾಗಲು ಕಾರಣವಾಗುವ ಮತಾಂತರದ ಬಗ್ಗೆ ಸ್ವಲ್ಪ ಯೋಚಿಸಿ ಎಂದು ಹೇಳುವ ಕನಿಷ್ಟ ಬುದ್ಧಿಯೂ ನಿತ್ಯ ಕಕ್ಕಸಿನೊಂದಿಗೆ ಸೇರಿತೋ....? ಇಲ್ಲಿ ಈ ರೀತಿ ಹೇಳುವ ನಾಯಕರನ್ನು ಯಾರು ಗುತ್ತಿಗೆಯಾಧಾರದಲ್ಲಿ ನೇಮಿಸಿಕೊಂಡಿದ್ದಾರೋ ಅಥವಾ ಇವರೇ ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಲು ಇತರರ ಪಾಯಿಖಾನೆ ತೊಳೆಯುವ ಕಾರ್ಯಕ್ಕೆ ಹಚ್ಚಿಕೊಂಡಿದ್ದಾರೋ.....ಇದು ಕೋಟಿ ಪ್ರಶ್ನೆ.
ಮಾತು ಮಾತಿಗೆ ಗುಜರಾತನ್ನು ಅಲ್ಲಿಯ ಮೋದಿಯನ್ನು ಎತ್ತೆತ್ತಿ ತೊರಿಸುವ ಇತರರಿಗೆ ಮೋದಿ ಅಭಿವ್ರದ್ದಿಯಲ್ಲಿ ಉತ್ತರ ಕೊಟ್ಟರು ತಮ್ಮ ಮೂಗಿನ ಸಿಂಬಳ ಒರಸಿಕೊಳ್ಳಲಾಗದವರು, ಕಾಮಾಲೆಯವರು, ಅದ್ಯಾಕೆ ಗುಜರಾತ್ ಮಾದರಿ ಸರಕಾರ ಬೇಡ ಅಲ್ಲಿಯ ತರದ ಅಭಿವ್ರದ್ದಿ ಬೇಡ ಅಂತಾರೊ ದೇವರಿಗೆ ಗೊತ್ತು.
ನಿಮ್ಮ ಖಾಯಿಲೆಯನ್ನು ,ನಿಮ್ಮ ಸರಿಯಿಲ್ಲದ ದೇವರನ್ನು ಮೆಟ್ಟಿ ನಿಲ್ಲುವ ನಮ್ಮ ಏಸು ಇದ್ದಾನೆ ಅನ್ನುವ ಜನರಿಗೂ ಸತ್ಯದ ಕಣ್ಣು ಕಾಣುವುದಿಲ್ಲವೇ.....ಎಲ್ಲವನ್ನು ಸರಿಪಡಿಸುವ ದೇವರಿದ್ದಾನೆ ಅನ್ನುವ ಹಾಗಿದ್ದರೆ ಪ್ಲೀಸ್ ನೀವು ನಿಮ್ಮದೇವರನ್ನೊಮ್ಮೆ ಕಾಮಾಲೆಯವರ ಹತ್ತಿರ ಕಳಿಸಿ ಅವರ ಕಣ್ಣು ಮನಸ್ಸುಗಳನ್ನು ತೆರೆಸಿ ಗುಜರಾತ್ ಮಾದರಿ ಅಭಿವ್ರದ್ದಿಯೆಂದರೆ ಹೇಗೆ ಎಂದು ತೋರಿಸಿಕೊಡಿ,ಇಲ್ಲದಿದ್ದರೆ ನೀವು ಹೇಳುವುದೆಲ್ಲವೂ ನಿಮ್ಮ ದೇವರಬಗ್ಗೆ ಹೇಳುವ ಮಾತುಗಳೂ ಡೋಂಗಿತನವಾಗುತ್ತದೆ. ಬೇಸರವಾದರೆ ಕ್ಷ್ಯಮಿಸಿ, ದೇವರನ್ನು ನಂಬುವ ಉದ್ಧೇಶ ಸನ್ನಡತೆಯಲ್ಲಿ ನಮ್ಮನ್ನು ನಡೆಸಿಕೊಂಡು,ಇರೋವಷ್ಟು ದಿನ ನೆಮ್ಮದಿಯ ಜೀವನ ಕೊಡಪ್ಪಾ ಅಂತ.ಪರನಿಂದೆಯ ಮಾಡು ಪರಧರ್ಮವ ಅವಹೇಳನ ಮಾಡು ಅಂತ ಅಲ್ಲ.ಈ ಕಳಕಳಿಯ ವಿನಂತಿ ನಿಮ್ಮಲ್ಲಿ ಯಾಕಂದ್ರೆ ನೀವು ಗಲಭೆಪ್ರಿಯರಲ್ಲ ಶಾಂತಿಪ್ರಿಯರು ನೀವು ದೇಶದ ಒಳಿತಿಗಾಗಿ ಜಗತ್ತಿನ ಶಾಂತಿಗಾಗಿ ಪ್ರಾರ್ತಿಸುವವರು ಅಂತೆಲ್ಲ ಹೇಳಿಕೆ ಕೊಡುತ್ತೀರಿ,ನಿಮ್ಮ ಮೇಲೆ ಗೌರವವಿದೆ ಪ್ಲೀಸ್ ದೇಶಕ್ಕಾಗಿ ಈ ಒಳ್ಳೆಯ ಕೆಲಸ ಮಾಡಲಾರಿರ.ಹಿಂದುತ್ವದಲ್ಲಿ ಇದು ಸಾಧ್ಯವಿಲ್ಲ ಯಾಕಂದ್ರೆ ಹಿಂದು ದೇವತೆಗಳು ನಿತ್ರಾಣಿಗಳು ವಿಲಾಸಿಗಳು ಸ್ವಾರ್ಥಿಗಳು.....
ಲಾವಾರಸ ಬಿರುಸಾಗಿದ್ದರು ಅದು ಭೂಮಿಯಡಿಯಲ್ಲಿಯೆ ಕೇಂದ್ರೀಕ್ರತವಾಗಿರುತ್ತದೆ.ಅಷ್ಟು ಸುಲಭವಾಗಿ ಸ್ಪೋಟವಾಗುವುದಿಲ್ಲ ಹಿಂದುತ್ವವೂ ಕೂಡ ಹಾಗೆಯೆ ಸ್ಪೋಟಗೊಂಡಲ್ಲಿ ವಿನಾಶ ಖಂಡಿತ.ಅದೆಷ್ಟೊ ವರ್ಷಗಳಿಂದ ಮತಾಂತರ ನಡೆಯುತ್ತಿದ್ದರು ಎಲ್ಲವನ್ನು ಸಹಿಸಿಕೊಂಡು ತನ್ನ ಪಾಡಿಗೇ ತಾನಿತ್ತಲ್ವ ಅದನ್ನೆ ವೀಕ್ನೆಸ್ ಅಂದುಕೊಂಡು ಧರ್ಮದಗಣಿಗಾರಿಕೆ ಮಾಡಿದರೆ...... ಯಾವ ದೇವರೂ ಪರಧರ್ಮದ ತಲೆಹಿಡುಕರಾಗಿ ಎಂದು ಹೇಳಿಲ್ಲ.ಈರೀತಿ ಹೇಳಿಕೆ ಕೊಟ್ಟು ಸಮರ್ಥಿಸಿದ್ದರೆ ಅದು ದೇವರಾಗುವುದಕ್ಕೆ ಸಾಧ್ಯವಾಗುವುದಿಲ್ಲ,ಬದಲಾಗಿ ಈಗಿನ ಸ್ವಾರ್ಥ ರಾಜಕಾರಿಣಿಯಾಗಿರುತ್ತದೆ.
ಧರ್ಮದ ಅಕ್ರಮ ಗಣಿಗಾರಿಕೆಯೆಇವತ್ತಿನ ಸ್ಪೋಟಕ್ಕೆ ಕಾರಣ.ಗಣಿಗಾರಿಕೆ ಮಾಡಿದವರಾರು?ಯಾವ ಧರ್ಮದ ದೇವರೂ ಸುಳ್ಳು ಹೇಳುವುದಿಲ್ಲ ಅನ್ನುವುದೂ ಸತ್ಯ ಅಲ್ಲವೇ ,ಹಾಗಿದ್ದರೆ ನಿಮ್ಮ ಮುರಿದು ಬಿದ್ದಿರುವ ಶಿಲುಬೆಯನ್ನೊಂಮ್ಮೆ ದಿಟ್ಟಿಸಿ ಆತ್ಮಪೂರ್ವಕವಾಗಿ ಕೇಳಿಕೊಳ್ಳಿ ನಿಮ್ಮ ಮಹಾಪ್ರಸಾದದಷ್ಟೇ ಹಿಂದುಗಳ ದೇವರ ಪ್ರಸಾದಗಳೂ ಪವಿತ್ರವಾಗಿರುತ್ತವೆ ಅಲ್ವಾ.ಅದು ಅಪವಿತ್ರವಾಗೋದನ್ನ ಸಹಿಸಿಕೊಳ್ಳುವುದಕ್ಕೆ ಸಾಧ್ಯಾನಾ ಅಂತ ಭಾವುಕರಾದರೆ ಅದೇರೀತಿಯಲ್ಲಿ ಅವಮಾನಕ್ಕೊಳಗಾದ ಹಿಂದೂಗಳೂ ಭಾವುಕರಾಗೊದ್ರಲ್ಲಿ ತಪ್ಪೇನಿದೆ.
ಮಂಗಳೂರಿನಲ್ಲಿಯ ವಿಷಯಕ್ಕೆ ಬಂದರೆ...... ಎಲ್ಲ ಅನಾಹುತಗಳೂ ನಡೆದು ಹೋದವು ಶಾಂತಿ ಪ್ರಿಯರೂ ಅಶಾಂತಿ ಮೂಡಿಸುವಲ್ಲಿ ಎತ್ತಿದಕೈಗಳಿಗಿಂತ ತಾವೇನು ಕಮ್ಮಿ ಇಲ್ಲ ಅನ್ನುವ ಹಾಗೆ ವರ್ತಿಸಿದರು.ಕೊನೆಗೆ ತಾವು ಇಲ್ಲಿ ಭಯಭೀತರಾಗಿದ್ದೇವೆ ಅಂದರು ಈ ಮಾತು ಚಾನೆಲ್ಲುಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಎಲ್ಲ ಧರ್ಮೀಯರ ಚರ್ಚೆಯನ್ನು ಚಾನೆಲ್ಲುಗಳು ಶುರುಮಾಡಿದ್ದವು....ಅಲ್ಲಿ ಮಾತುಗಳು ಹೀಗಿತ್ತು...
ಬೇಸತ್ತ ಧರ್ಮೀಯರು ಭಾವುಕರಾಗಿದ್ದರು ಆ ಕಾರಣದಿಂದ ಕಾನೂನು ಕೈಗೆತ್ತಿಕೊಂಡರು ಎಂದು. ಇದು ಕ್ರಿಸ್ಚಿಯನ್ ಪಾದ್ರಿಯೊಬ್ಬರ ಮಾತಾಗಿದ್ದರೆ ಹಿಂದು ಮುಂದಾಳುವೊಬ್ಬರು ನಮ್ಮವರ ಮನೋಸ್ಥಿತಿಯು ಅದೆಷ್ಟೋ ವರ್ಷಗಳಿಂದ ಅದೇ ಆಗಿತ್ತು ಅಂದರು.....
ಹಾಗಿದ್ದರೆ ಎಲ್ಲದಕ್ಕು ಮೂಲ ಮನೋಸ್ಥಿತಿ.ರಾಜಕೀಯದಲ್ಲಿ ಸೌಹಾರ್ಧ ಮನೊಸ್ಥಿತಿ ಮರೆತುಬಿಟ್ಟ ಪದವಾಗಿದ್ದರು ಆಹ್ಲಾದಕರ ಮನೋಸ್ಥಿತಿ ಧಾರ್ಮಿಕ ನಾಯಕರಲ್ಲಿ ಯಾಕೆ ಮರೆಯಾಗುತ್ತೆ. ಮಂಗಳೂರಿನ ಗಲಾಟೆ ಇನ್ನೂ ಬಿಗುವಾಗುವ ಸೂಚನೆಯ ಮಧ್ಯೆ ಕ್ರಿಸ್ಚಿಯನ್ ಧಾರ್ಮಿಕ ಮುಖ್ಯಸ್ಥರೊಬ್ಬರು ಮತಾಂತರಕ್ಕು ನಮಗು ಯಾವ ಸಂಬಂಧ ಇಲ್ಲ ನ್ಯೂ ಲೈಫ್ ಬಗ್ಗೆ ಗೊತ್ತಿಲ್ಲ ಅಂದರು.ಅದೆಷ್ಟೋ ವರ್ಷಗಳಿಂದ ಅವ್ಯಾವಹತವಾಗಿ ನಡೆದುಕೊಂಡು ಬಂದಂತಹ ಈ ಮಹತ್ಕಾರ್ಯಗಳು ತಮಗೆ ಸಂಬಂಧ ಪಡದ್ದು ಅಂದಿದ್ದು ತಡವಾಗಿಯಾದರೂ ಒಳ್ಳೆಯ ಬೆಳವಣಿಗೆ.ಲಾವಾರಸದ ಸ್ಪೋಟಕ್ಕೆ ಮುಂಚಿತವಾಗಿ ಈ ಹೇಳಿಕೆ ಬಂದಿದ್ದರೆ ನೀವು ಹಿಂದೂಗಳಲ್ಲಿಯು ನಿಜವಾದ ಆದರ್ಶ ವ್ಯಕ್ತಿಯಾಗುತ್ತಿದ್ರಿ.ಈಗಲು ನಿಮಗೆ ಥಾಂಕ್ಸ್ ಹೇಳಲೇ ಬೇಕು ಶಾಂತಿಪ್ರಿಯರಾದ ನೀವು ನಿಜವಾದ ಶಾಂತಿಯನ್ನು ಮೊಡಿಸುವಲ್ಲಿ ಒಂದು ಹೆಜ್ಜೆ ಇಟ್ಟಿದ್ದೀರಿ ಎಂದೇ ಹೇಳಬಹುದು.ಅಷ್ಟೇ ಅಲ್ಲ ಕ್ರಿಸ್ಚಿಯನ್ ಹಿಂದೂ ರಗಳೆಯನ್ನು ಪರಿಹರಿಸುವುದು ಕಡ್ಡಿ ಮುರಿದಷ್ಟು ಸುಲಭ.ನಮ್ಮದನ್ನು ನಾವು ಗೌರವಿಸುವ ಅನ್ನುವ ನಿಲುವಿಗಂಟಿಕೊಂಡರೆ ಧರ್ಮದ ಗಣಿಗಾರಿಕೆ ನಿಂತರೆ ಪರಿಸರವೇ ಶಾಂತಿಪ್ರಿಯವಾಗುತ್ತದೆ.ಕ್ರಿಸ್ಚಿಯನ್ ಹಬ್ಬಗಳಿಗೆ ಹಿಂದೂಗಳು ಹಿಂದೂಗಳ ಹಬ್ಬಕ್ಕೆ ಕ್ರಿಸ್ಚಿಯನ್ನರು ಅತಿಥಿಗಳಾಗಿ ಹೋಗುವ ಪರಿಸರವನ್ನು ಬೆಳೆಸುವುದು ಕಷ್ಟದ ಕೆಲಸವೇನಲ್ಲ.ಪರಸ್ಪರ ಗೌರವದ ಬಾಳು ನಮ್ಮದಾಗಬೆಕು.ಮತಪರಿ-ವರ್ತಕಕರಾಗಿ ನಮ್ಮದಲ್ಲದ ದೇಶಕ್ಕೆ ನಾವು ಯಾಕೆ ಮತಹಿಡುಕರಾಗಬೇಕು.ಹಾಗೆಯೆ ಸ್ವ-ಇಚ್ಚೆಯ ನಿರ್ಧಾರದಿಂದ ಯಾರೇ ನಮ್ಮ ಬಳಿಬಂದರು ತಿರಸ್ಕಾರ ಬೇಡ.
ಎಲ್ಲಾ ಮತದ ನಾಯಕರಿಗು, ಅವರವರು ನಂಬುವ ಶಕ್ತಿ ಇಲ್ಲದದೇವರೇ ಆಗಲಿ ,ಶಕ್ತಿ ಇರುವ ದೇವರೇ ಆಗಲಿ, ಪ್ರಪಂಚಕ್ಕೊಬ್ಬನೆ ನಮ್ಮವನು ಅಂದುಕೊಂಡವರಿರಲಿ, ನಿಮ್ಮನ್ನು ರಾಜಕೀಯಕ್ಕೆ ಮಾರಿಕೊಳ್ಳಬೇಡಿ.ಅವಗಡಗಳು ಮತ್ತು ಅಶಾಂತಿಗಳು ಉಂಟಾದಾಗ ಆಪತ್ಭಾಂದವರಂತೆ ಖಾದಿ ತೊಟ್ಟು ಬರುವವರಲ್ಲಿ ನರಿಬುದ್ಧಿಯವರೇ ಜಾಸ್ತಿ,ಅವರ ಓಟಿನ ಸ್ವಾರ್ಥಕ್ಕೆ ಕುರುಡು ಧರ್ಮಬೇಕು, ಕಿವುಡು ಜನ ಬೇಕು, ಭಾವುಕ ಮತಗಳು ಬೇಕು, ಹಾವುಏಣಿಯಾಟದಲ್ಲಿ ಅವರು ಗೆದ್ದ ಮೇಲೆಮತ್ತೆ ಮತ್ತೆ ಧರ್ಮ ಒಡೆಯಬೇಕು,ಹಿತಚಿಂತಕರಂತೆ ಮತ್ತೆ ಮತ್ತೆ ಅವರುಭವಿಷ್ಯದ ಜಯಪತಾಕೆ ಹಾರಿಸಲು ಬರುತ್ತಿರುತ್ತಾರೆ ಬೊಬ್ಬಿಡುತ್ತ ಆರ್ಭಟಿಸುತ್ತ ಗೂಳಿಡುತ್ತ......ಟಾರಿಲ್ಲದ ರೋಡಲ್ಲಿ....ಹಸಿವಿರುವ ನಾಡಿನಲ್ಲಿ...
ಹಸಿದವನಿಗೆ ಒಂದು ತುತ್ತು ಅನ್ನ,ರೋಗಿಗೆ ಗುಳಿಗೆ,ಸಾವಿನ ಅಂಚಿನಲ್ಲಿರುವವನಿಗೆ ಒಂದು ತೊಟ್ಟು ನೀರು,ಈರೀತಿಯ ಜನಪರ ಮನುಷ್ಯತ್ವ ಪರ ಭಾವುಕತೆಗಳು ನಮ್ಮನ್ನು ಒಂದೇ ಧ್ವಜದಡಿಯಲ್ಲಿ ಬಂದಿಸಲಿ.ಜನಪರ ಅಂದುಕೊಂಡ ಸ್ವಹಿತ ಪ್ರಚಾರಪ್ರಿಯ ಪ್ರಾಯೋಜಿತ ಕಾರ್ಯಕ್ರಮಗಳ ಮುಖವಾಡಗಳ ಕುರಿತಾಗಿ ಎಚ್ಚರದಿಂದಿರುವುದು ಒಳಿತು.ಕೆಲಸರ್ತಿ ಜನಪರ ಅನ್ನುವ ಕಾರ್ಯಕ್ರಮಗಳೇ ಇನ್ನೊಬ್ಬರ ಸ್ವಾರ್ಥ ಕ್ಷೇತ್ರವಾಗಬಹುದು.ಅಲ್ಲಿಂದಲೂ ತುಪ್ಪಸುರಿಯುವ ಕಾರ್ಯ ನಡೆಯಬಹುದು.
ಹಿಂದೂಗಳು ಕೂಡ ಇನ್ನೊಬ್ಬರ ಕಡೆ ಬೆರಳು ತೋರಿಸುವ ಬದಲಾಗಿ ತಮ್ಮಲ್ಲಿರುವ ಕೊಳೆಯನ್ನು ತೊಳೆದುಕೊಳ್ಳುವುದು ಒಳಿತು.
ಅನ್ಯರನ್ನು ಸಂತೈಸುವ ಅಗೆಯುವ ಬಗೆಯುವ ಕಾರ್ಯಗಳನ್ನು ಬಿಟ್ಟು ನಮ್ಮನಮ್ಮ ಧರ್ಮಗ್ರಂಥಗಳ ಮುಂದೆ ಕುಳಿತು ಶಾಂತಿಗಾಗಿ ದಿನದ ಒಂದು ಕ್ಷ್ಯಣ ಧ್ಯಾನಿಸೋಣ,ನಮ್ಮ ಪಟಲದಲ್ಲಿ ಸಮ್ರದ್ಧ ದೇಶದ ಚಿತ್ರ ಮೂಡಲಿ.ಮತಬ್ಯಾಂಕ್ ಇಲ್ಲದ ರಾಜಕೀಯ ಈ ದೇಶ ಕಾಣಲಿ.ಆಗ ಮನುಷ್ಯರೊಂದಿಗೆ ಪ್ರತಿಮೆಗಳ ಅಂಗಾಂಗಗಳು ಮುರಿಯದೆ ಉಳಿಯುತ್ತದೆ.