Saturday, September 20, 2008

ಎಲ್ಲವನ್ನು ಪ್ರಾಪ್ತಿಸಿಕೊಂಡ ಅಪ್ರಾಪ್ತರು

ಡೊಂಕುಬಾಲದ ನಾಯಕರೆ ನೀವೇನೂಟವಾ ಮಾಡುವಿರಿ.......
ಹಾಗಿರುವವರಿಗೆ ಹೊಂದಿಸಿದ್ಧ ಈ ಸಾಲುಗಳು ಇವತ್ತು ಹೀಗೂ ಆಗುವ ದಾರಿ ಹಿಡಿದಿದೆ.
ಅಲ್ಪಬುದ್ಧಿಯ ಬುದ್ಧಿಜೀವಿಗಳೆ (ಕೆಲ)ನೀವೇನೂಟವಾ ಮಾಡುವಿರಿ.......
ಯಾಕ್ರೀ ನೀವುಗಳು ಹೀಗಾಗುತ್ತಿದ್ದೀರಿ.ಲೋಕದ ಡೊಂಕನ್ನು ತಿದ್ದುವಂತಹ ಕಾರ್ಯ ನಿಮ್ಮಿಂದ ಆಗದೇ ಹೋದರು ಕೊನೆಪಕ್ಷ ಡೊಂಕನ್ನು ಎತ್ತಿತೋರಿಸಿ ಅದು ನಿಷ್ಪಕ್ಷವಾಗಿ.ನಿಮ್ಮ ಕಣ್ಣಿಗೂ ರಾಜಕಾರಿಣಿಯಂತ ಪೊರೆ ಯಾಕ್ಬಂತೋ....ಅದೆಷ್ಟು ಮಾನಹೀನರಾಗಿ ಧರ್ಮಗಳ ವಿಚಾರವಾಗಿ ಬಾಯಿಗೆ ಬಂದಂತೆ ಒದರುತ್ತೀರಿ.ವಿವೇಚನೆಯನ್ನು ಯಾವ ಶರಾಬು ಅಂಗಡಿಯಲ್ಲಿ ಗಿರವಿ ಇಟ್ಟುಬಿಟ್ಟಿದ್ದೀರಿ......ಮರುಕದೊಂದಿಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ.ನೀವುಗಳೆಲ್ಲ ಯಾಕೆ ಹೀಗಾಡ್ತಿದ್ದೀರಿ.....ನಿಮ್ಮನ್ನು ಗುತ್ತಿಗೆಗೆ ಹಾಕಿಕೊಂಡವರು ನಿಮಗೆಷ್ಟು ಡಾಲರ್ ಬೆಲೆ ಕಟ್ಟಿರಬಹುದು.ನಾಡಿನ ಶ್ರೇಷ್ಟರಲ್ಲಿ ನಿಮ್ಮನ್ನು ಕಂಡ ಕಣ್ಮನಸುಗಳು ಬಹುಶ ಅದೆಷ್ಟು ಪಾಪ ಮಾಡಿದ್ವೋ.....ಮನಸ್ಸಿನಿಂದ ಕಿತ್ತುಹಾಕಲಾಗದೆ ಒಳಗೆ ಸೇರಿಸಿಕೊಳ್ಳಲಾಗದೆ ಡೊಂಕುಬಾಲದವರಾಗಿ ಇವರು ವಾಸನೆಯತ್ತ ಓಡುತ್ತಿದ್ದಾರಲ್ಲ (ವಿವೇಚನೆಯಿಂದ ಮುಕ್ತಿ)ನಮ್ಮನ್ನು ನಾವೆ ಶಪಿಸಿಕೊಳ್ಳಬೇಕಷ್ಟೆ.
ಸಾರ್ವಜನಿಕವಾಗಿ ಮನ್ನಣೆ ಪಡೆವವ್ಯಕ್ತಿಯಾದ ನಂತರ ಯಾರ ಪರವೂ ನಿಲ್ಲದೆ ನಿಷ್ಟುರವಾದಕ್ಕೆ ಅಂಟಿಕೊಂಡಿರಬೇಕಾದುದು ಧರ್ಮ,ಅದರ ಬದಲಾಗಿ ನಾನು ಮತಾಂತರಗೊಳ್ಳುತ್ತೇನೆ ಯಾವನು ತಡೆಯುತ್ತಾನೆ ನೋಡೋಣ ಅಂತ ಪೊರ್ಕಿ ಷ್ಟೈಲ್ನಲ್ಲಿ ಮೀಡಿಯಾದ ಮುಂದೆ ಅರಚಾಡ್ತೀರಲ್ಲ.......ಟಿವಿ ನೋಡ್ತಿದ್ರೆ ಟಿವಿಯಿಂದಲೇ ಮನೆತುಂಬ ಗಬ್ಬು ವಾಸನೆ ಬುರುವುದಕ್ಕೆ ಶುರುವಾಗಿ ವಾಂತಿ ಬರುವ ಹಾಗಾಯಿತು.ನಿಮ್ಮಂತಹವರಾದ್ರು ಸಮಾಜದ ಕಣ್ಣುಗಳಾಗಬೇಕು.ನೀವೇ ಮಚ್ಚು ಲಾಂಗು ಹಿಡಿಸುವಂತ ಪ್ರೇರಕರಾಗಬಾರದು.ಅಶಾಂತಿ ಉಂಟಾದಲ್ಲಿ ರಾಜಿಮಾಡಿಸಿ ತಪ್ಪು ಮಾಡಬಾರದ ಹಾಗೆ ಬುದ್ಧಿ ಹೇಳಿ.....ನೀವೇ ಬುದ್ಧಿಹೀನರಾಗಬೇಡಿ.ಸ್ವಾಸ್ಥ್ಯ ಕೆಡಿಸಲು ನಮ್ಮ ದೇಶದಲ್ಲಿ ಬೇಕಾದ್ದಕ್ಕಿಂತ ಹೆಚ್ಚೇ ಕೊಚ್ಚೆಗಳಿದೆ(ದ್ದಾರೆ).
ನಿಮ್ಮಂತಹವರ ಮಕ್ಕಳಿಗೆ ಸಾಧಾರಣ ಚಾಕಲೇಟು ತಿಪ್ಪೆಗೆಸೆಯುವ ವಸ್ತುವಾಗಬಹುದು........ಅದೇ ವಾರಕ್ಕೊಂದು ಐವತ್ತು ಪೈಸೆಯ ಚಾಕಲೇಟು ತಿನ್ನುವ ಮಗುವಿನ ಮನೆಗೆಬಂದು ನೀವು ಚಾಕಲೇಟು ತೋರಿಸಿ ಆ ಬಡವರ ಕಣ್ಣಲ್ಲಿ ತುಂಬ ದೊಡ್ಡವರಾಗಿ ಕಾಣುತ್ತೀರಿ ಆ ಮಗುವನ್ನು ಆಸೆಗೀಡು ಮಾಡುವ ಮುಖಾಂತರ ನೀವು ನಿರಾಯಾಸವಾಗಿ ಲಪಟಾಯಿಸಬಹುದು.....ನೀವು ದೊಡ್ಡವರು ನಿಮ್ಮಲ್ಲಿ ಡಾಲರ್ ರುಚಿಯ ದುಡ್ಡಿರುತ್ತದೆ ಫಾರಿನ್ ಚಾಕಲೇಟನ್ನ ತೊಗೊಂಡು ಹೋದ್ರಿ ಅಂತ ಇಟ್ಟುಕೊಳ್ಳಿ.....ಅದ್ಭುತವಾದ ರುಚಿತೋರಿಸಿ ಅಪ್ಪಾಮ್ಮನಿಗೆ ಗೊತ್ತಿಲ್ಲದಂತೆ ಅಲ್ಲ ಬೇಡ ಬೇಡ ಎಂದು ಗೋಗೊರೆಯುತ್ತಿರುವವರ ಎದುರೇ ಆ ಮನೆಯ ಕರುಳಬಳ್ಳಿಯನ್ನು ನೀವು ಕದಿಯಬಹುದು.ಇದು ದ್ರೋಹ ಅಲ್ಲವೇ ಮಹನೀಯರೆ. ಆದರೆ ನಿಮ್ಮನ್ನು ಹಿಡಿಯುವವರಿಲ್ಲ.ನಿಮ್ಮ ಹಿಂದೆ ಡಾಲರ್ ಹಾಗು ಮತಿಗೆಟ್ಟ ಕೆಲ ನಾಯಕರಿರುತ್ತಾರೆ ಅವರು ನಿಮ್ಮನ್ನು ರಕ್ಷಿಸುತ್ತಾರೆ....ನಿಮಗೂ ಅವರು ಬೇಕಾಗುತ್ತಾರೆ ಈ ರೀತಿ ಪುಂಗಿ ಊದೋದ್ರಿಂದ ನಿಮಗೀಗಿರೋ ಪೀಟದೊಂದಿಗೆ ಇನ್ನೊಂದೇನಾದ್ರು ಸಿಗಬಹುದು.ಕೆಲಸರ್ತಿ ನಮ್ಮನ್ನಾಳುವ ನಾಯಕರಿಗೂ ಬಾಯಿತುಂಬ ಹೆಂಡದವಾಸನೆ ಬರುವ ಬುದ್ದಿವಂತ ದೊಡ್ಡವ್ಯಕ್ತಿಗಳು ಬೇಕಾಗುತ್ತಾರೆ.ನೀವುಗಳು ದಾಸಯ್ಯನ ಶಂಖವಾಗ್ತೀರ ಆ ಶಂಖದೊಳಗಡೆ ಅಸಹ್ಯ ಉಗುಳು.....ನಿಮ್ಮ ಜೋಳಿಗೆಯ ತುಂಬ ಶುದ್ಧೀಕರಣ ದ್ರಾವಣ ಇರಲಿ ರೋಗರುಜಿನ ಹರಡುವ ಕಲ್ಮಶ ಬೇಡ ಪ್ಲೀಸ್ .
ಬುದ್ಧಿಗೇಡಿಗಳೆಂದು ಕೆಲವರನ್ನು ನಿಂದಿಸುವಾಗ ಬುದ್ಧಿಜೀವಿಗಳೆನಿಸಿಕೊಂಡ ನೀವುಗಳು ನಿಮ್ಮ ಬುದ್ಧಿಯನ್ನು ಹೊಲಸು ಮೋರಿಯಾಚೆ ತೆರೆದಿಡಬೇಡಿ.
ಇನ್ನೊಬ್ಬರು ಮಹಾನುಭಾವರು ಒಂದು ಹೇಳಿಕೆ ಕೊಡುತ್ತಾರೆ.ಎಲ್ಲರನ್ನು ಮೀರಿಸುವಂತೆ, ಪ್ರಪಂಚಕ್ಕೆ ಮತಾಂತರ ನಮ್ಮ ದೇಶದ ಮಹಾನ್ ಕೊಡುಗೆಯಂತೆ.....ಈವರಾಡುವ ಮಾತಿಗೆ ಇವರನ್ನು ಸ್ವರೇಪಿಸ್ಟ್ ಅನ್ನಬೇಕಷ್ಟೆ.ಇಂತಹವರಿಂದಾಗಿ ಸಮಾಜದ ಸ್ವಾಸ್ಥ್ಯಕ್ಕೆ ಏಡ್ಸ್ ತಗುಲದಿರಲಿ.ನಿಮಗೆಲ್ಲ ಅಪ್ರಾಪ್ತ ಮಾತು ಮೈತುನದ ಚಟವಿರಬಹುದು ......ಆದರು ಪ್ಲೀಸ್ ನೀವು ನಿಮ್ಮಚಟಕ್ಕೆ ಕಾಂಡೋಮ್ ಬಳಸುವುದೊಳಿತು.

0 Comments:

Post a Comment

Subscribe to Post Comments [Atom]

<< Home