Sunday, June 7, 2009

ಅವಳೊಬ್ಬಳು

ಒಂದು ದಿನ ಅವನನ್ನು ಅವನ ಗೆಳೆಯರು ಅವರಲ್ಲಿ ಒಬ್ಬನ ಹುಟ್ಟುಹಬ್ಬಕ್ಕೆ ರಾತ್ರಿ ಹತ್ತು ಗಂಟೆಗೆ ಬರುವಂತೆ ಹೇಳಿದ್ದರು .ಹೋಗದಿದ್ದರೆ ಸರಿ ಇರೊದಿಲ್ಲ ಮಾತುಕೇಳಬೇಕಾಗುತ್ತದೆ ಎಂದು ಹತ್ತು ಗಂಟೆಗೆ ಹೋದರೆ ಆ ಮನೆಯಲ್ಲಿ ಯಾರೂ ಇರಲಿಲ್ಲ.
ಆ ಮನೆ ಇದ್ದಿದ್ದು ಮಾಗಡಿ ರಸ್ತೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ.ಅವನಲ್ಲಿ ಇದ್ದುದ್ದು ಮತ್ತೆ ಹಿಂದಿರುಗಲು ಬೇಕಾದಷ್ಟು ಹಣ ಮಾತ್ರ.ಹಲವು ವರ್ಷಗಳ ಹಿಂದೆ ಇದು ನಡೆದಿದ್ದು.
ಹೊತ್ತು ಕಳೆಯುತ್ತಿದ್ದಂತೆ ಗೆಳೆಯರು ಬರುತ್ತಾರೊ ಇಲ್ವೋ ಅನ್ನುವ ಅನುಮಾನ ಕಾಡೊದಕ್ಕೆ ಶುರುವಾಗಿ ಮನೆಯ ಹೊರಗಡೆ ಇರೋದೆ ಹಿಂಸೆ ಅನ್ನಿಸೋಕೆ ಶುರುವಾಯಿತು.ವಿಪರೀತ ಚಳಿಯ ಜೊತೆಗೆ ಆಮನೆಯ ಯಜಮಾನಿ ಆಗಾಗ ಬಂದು ನೋಡುತ್ತಿದ್ದಳು.ಗೆಳೆಯರು ಅವಳನ್ನು ವರ್ಣಿಸುತ್ತಿದ್ದ ರೀತಿಗೆ ತಾಕ್ಕಹಾಗೆ ಅಂದವಾಗಿ ಮತ್ತುಕಟ್ಟುಮಸ್ತಾಗಿದ್ದಳು.
ಪಕ್ಕದ ಇನ್ನೊಂದು ಬಾಗಿಲಿಂದ ಇನ್ನೆರಡು ಮುಖಗಳು ಆಗಾಗ ಇಣುಕುತ್ತಿದ್ದವು.ಅದುಅವಳ ತಂಗಿ ಮತ್ತು ತಂಗಿಯ ಗಂಡನದ್ದೆಂದು ತಡವಾಗಿ ಅರ್ಥವಾಯಿತು.
ಆ ಸುಂದರಿ ಹಲವಾರೆಉ ಸರ್ತಿ ಬಂದು ಅವನನ್ನು ವಿಚಾರಿಸಿ ವಿಚಾರಿಸಿ ಒಳಗೆ ಬರುವಂತೆ ಪ್ರೇರೇಪಿಸುತ್ತಿದ್ದಳು.ಹೀಗೇ ಆಗುತ್ತದೆಎಂದು ತಿಳಿದಿದ್ದ ಮಿಕ್ಕಿಬ್ಬರು ಇನ್ನೂ ಸಂದಿಯಿಂದ ನೋಡತೊಡಗಿದರು.ಅವರನ್ನು ವಾರೆಗಣ್ಣಲ್ಲಿ ನೋಡಿದ ಆಕೆ ಅವನ ಕೈ ಹಿಡಿದೆಳೆಯಲು ಶುರುಮಾಡಿದಳು.ಅಷ್ಟರಲ್ಲಿ ಎದುರಿಗಿರುವ ಮನೆಯ ಬಾಗಿಲು ತೆರೆದು ಹೊರಬಂದ ಒಬ್ಬಾತ ಏನ್ ದರಿದ್ರದೋರಯ್ಯ ಒಳಗೆ ಹೋಗೋಕೆ ಆಗಲ್ವ ಅಂದ

0 Comments:

Post a Comment

Subscribe to Post Comments [Atom]

<< Home