Friday, September 4, 2009

ಅಮ್ಮಾ...

ಅಮ್ಮಾ ...
ಕಣ್ಮುಚ್ಚಿ... ಮನಬಿಚ್ಚಿ...ದೀರ್ಘ ಉಸಿರು ತೆಗೆದು ಆ ಉಸಿರಿಗೆ ಮೆಲುಧ್ವನಿ ಸೇರಿಸಿ ನಿಧಾನಕ್ಕೆ ಅಮ್ಮಾ ಎಂದು ಹೇಳಿಕೊಂಡಾಗ...ಅದೆಷ್ಟು ಫ್ಲಾಷ್ ಬ್ಯಾಕ್ ದ್ರಷ್ಯಗಳು ಹಾದು ಹೋಗುತ್ವೋ...ಅವೆಷ್ಟು ಸರ್ತಿ ಅಮ್ಮ ನಕ್ಕಿದ್ದು ಅತ್ತಿದ್ದು ಗದರಿದ ಮುಖಭಾವದ ಫೋಟೊಗಳು ಕ್ಲಿಕ್ಕಿಸಿಕೊಂಡಂತಾಗುವುದೋ... ನಾವು ಹೀಗೆ ಪ್ರಯತ್ನಿಸಿದರೆ ಅಮ್ಮನ ಬಗ್ಗೆ ಸುಂದರವಾದ ಭಾವಗೀತೆಗಳನ್ನ ಬರೆಯಬೇಕೆಂದಿದ್ದರೆ ಬರೆಯಬಹುದು, ಆ ಭಾವಗೀತೆಗೆ ಪದಗಳ ಸಾಲು ಸಿಗದೇ ಇದ್ದರೆ ಇದಿಷ್ಟು ಮಾಡಿದರೆ.... ಭಾವಗೀತೆಯ ಚಿತ್ರಣವಾದರೂ ಸಿಗುತ್ತದೆ.
ಕೋಟಿ ಕೋಟಿ ಅಮ್ಮಂದಿರಲ್ಲಿ ಒಬ್ಬಾಕೆ ಅಮ್ಮನ ಗುಡಿಸಲ ಬಾಗಿಲಿಗೆ ಹೋಗೋಣ್ವ.
ಮುದರು...
ಹೆಸರು ಕೇಳುವುದಕ್ಕೆ ವಿಚಿತ್ರ ಅನ್ನಿಸುತ್ತೆ, ಹೆಸರಲ್ಲೇನಿದೆ...
ಮುದರು ಸ್ವಲ್ಪ ಎಡವಟ್ಟಾದರು ಈ ಹೆಸರು ಮುದುರು ಆಗಬಹುದು.ಮುದರುವಿನ ಬದುಕೇ ಕಾಡುಗಳ ಮಧ್ಯೆ ಐದು ಗುಡಿಸಲುಗಳಲ್ಲಿ ಒಂದರಲ್ಲಿ ಮುದುರಿಕೊಂಡಿತ್ತು.ತಾಯಿ ಪ್ರೀತಿಯ ಅದಷ್ಟೂ ಮಮಕಾರಗಳನ್ನು ತಬ್ಬಿಕೊಂಡು.ಈ ಗುಡಿಸಲುಗಳಿಗೆ ಪರ್ಲಾಂಗಿನಷ್ಟು ದೂರದಲ್ಲಿ ಬಚ್ಚಿರೆ ಭಟ್ಟರ ತೋಟದ ಮನೆ ಅಲ್ಲಿ ಮುದರು ಮತ್ತು ಅವಳ ಗಂಡ ಮೋಂಟನಿಗೆ ದಿನಕೆಲಸ.
ಮುದರುವಿನ ಮನೆಯಲ್ಲಿ ಎರಡುಮೂರು ಬೊಗ್ಗಿಗಳು (ಬೊಗ್ಗಿ-ಹೆಣ್ಣು ನಾಯಿ)ಪ್ರತಿವರ್ಷದಂತೆ ಮರಿಹಾಕಿದಾಗ ಗಂಡುಮರಿಗಳನ್ನು ಭಟ್ಟರ ಮನೆಗೆ ಕೊಡಬೇಕು ಹೇಣ್ಣಾದರೆ ತಾನೇ ಸಾಕಬೇಕು.ಮುದರುವಿನ ಮನೆಯ ಬೊಗ್ಗಿಗೆ ಒಳ್ಳೆಯ ಹೆಸರು ಇದ್ದಿದ್ದರಿಂದಾಗಿ ಹೆಣ್ಣುಮರಿಗಳಿಗೂ ಬೇರೆಯವರಿಂದ ಬೇಡಿಕೆ ಇತ್ತು.ಯಾರೇ ಮರಿಕೇಳುವುದಕ್ಕೆ ಬಂದರೂ ಅನ್ನ ಹಾಕುವುದು ಕಮ್ಮಿಯಾದರೂ ಪರವಾಗಿಲ್ಲ ಪ್ರೀತಿ ಕಮ್ಮಿ ಮಾಡಬೇಡಿಪಾಪ ಮಾತು ಬರದವು ಅಂತಾಳೆ ಮುದರು.ಮರಿಗಳನ್ನು ನಿಮಗೆ ಕೊಡುತ್ತಿಲ್ಲ ನನ್ನ ಮಕ್ಕಳನ್ನ ಕೋಡುತ್ತಿದ್ದೇನೆ ಎಂದು ಹೇಳುತ್ತಲೇ ನಾನು ಒಂದು ರೀತಿ ನಿಮ್ಮ ಮ್ಮನೆಗೆ ಬೀಗತಿ ಇದ್ದ ಹಾಗೆ ಅಂದು ಬಾಯಿತುಂಬ ನಗುತ್ತಾಳೆ.
ಮುದರುವಿಗೆ ಇಬ್ಬರು ಮಕ್ಕಳು ದೊಡ್ಡವನಿಗೆ ಎರಡೂವರೆ ವರ್ಷ ಚಿಕ್ಕವಳಿಗೆ ಹನ್ನೊಂದು ತಿಂಗಳು .ತಾವಿಬ್ಬರು ದುಡಿಯುವುದರಲ್ಲಿ ಸಂಸಾರ ಮತ್ತು ನಾಯಿ ಸಂಸಾರನೂ ಸಾಗಿಸಬೇಕಿತ್ತು ಗಂಡ ಮೋಂಟನಿಗೂ ಇದು ಬೇಸರ ತರುವ ವಿಚಾರ ಆಗಿರಲಿಲ್ಲ, ಬದಲಾಗಿ ಸಂಜೆ ಹೊತ್ತಲ್ಲಿ ಕಳ್ಳು ಕುಡಿದು ರಾತ್ರಿ ಮನೆಗೆ ಬಂದ ನಂತರ ನೀನು ನನ್ನಯಾಕೆ ಮದುವೆ ಆದೆ ಒಂದು ಒಳ್ಳೆ ನಾಯಿನೆ ನೋಡಿ ಆಗಬಹುದಿತ್ತಲ್ಲ ಅಂದಾಗ ಮುದರು ಇದ್ದಿದ್ದರಲ್ಲಿ ದಪ್ಪಗಿರುವ ನಾಯಿಯ ಬೆನ್ನು ಚಪ್ಪರಿಸುತ್ತ ಮದುವೆಯ ಸಂದರ್ಭ ನೀನೂ ಹೀಗೇ ಇದ್ದೆ ಎಂದು ರೇಗಿಸುವಳು ಆಗ ಮೋಂಟ ಅವಳಿಗಾಗಿ ಕುಪ್ಪಿಯಲ್ಲಿ ತಂದ ಕಳ್ಳನ್ನು ತಾನೇ ಕುಡಿಯುತ್ತ ಜೋರಾಗಿ ಸಂದಿ ಹಾಡುತ್ತ ಗಂಜಿಯ ಬಟ್ಟಲಿನ ಮುಂದೆ ಕೂರುತ್ತಿದ್ದನು.
ಒಂದು ದಿನ...
ಮುದರುವಿನ ಮನೆಯಲ್ಲಿ ರಾತ್ರಿಯವರೆಗೂ ಆರೋಗ್ಯವಾಗೇ ಇದ್ದ ಬೊಗ್ಗಿ ಮಿಣ್ಕು ಅಸುನೀಗುತ್ತದೆ ಮೋಂಟ ಇದು ಭೂತದ ಪೆಟ್ಟು ಅಂತಾನೆ.ಮುದರು ಅಳುತ್ತಾಳೆ ಮೋಂಟ ಸಮಾಧನಿಸುತ್ತಾನೆ.ಮಿಣ್ಕು ಮೂರುಮರಿಗಳನ್ನ ಅನಾಥವನ್ನಾಗಿಸಿ ಹೆಣವಾಗಿದ್ದಾಳೆ.ಆ ನಂತರ ಗೊತ್ತಗಿದ್ದು ಮಿಣ್ಕು ಸತ್ತಿದ್ದು ಬೊಮ್ಮಣ ಪೊಜಾರಿಯವರು ಇಟ್ಟ ವಿಷಕ್ಕೆ.ಇದಾದನಂತರ ಒಂದೆರಡು ದಿನ ಮುದರುವಿಗೆ ಕೆಲಸಕ್ಕೆ ಹೋಗಲಾಗಲಿಲ್ಲ ಮರಿಗಳು ಅಳುತ್ತಿದ್ದವು...ಭಟ್ಟರ ಕೊಟ್ಟಿಗೆ ಸೊಪ್ಪು ಹಾಕದೆ ಹಸುಗಳು ಹಾಲು ಕೊಡುತ್ತಿರಲಿಲ್ಲ.ಮಾರನೆಯ ದಿನ ಬೆಳ್ಳಂಬೆಳಗ್ಗೆ ಭಟ್ಟರು ದೂರದಿಂದ ಕೂಗುತ್ತಾ ಬಂದರು ಅವರುಗೂ ಸತ್ತ ನಾಯಿ ಭಯ ಇತ್ತು.ಭಟ್ಟರ ಕೂಗಿಗೆ ಮೋಂಟ ಇನ್ನೋಂದು ಬದಿಯಿಂದ ಓಡಿಹೋಗಿ ಅವರ ಹಿಂದೆಯೇ ನಿಂತು ಅವನೂ ಕೂ ಹಾಕಿ ಏನೆಂದು ಕೇಳುತ್ತಾನೆ .ನೀನೆಲ್ಲಿದ್ದೆ ಅಂದಾಗ ತೋಟದಲ್ಲಿದ್ದೆ ನಿಮ್ಮ ಕೂ ಕೇಳಿ ಹೀಂದೆನೇ ಒಡಿಬಂದೆ ಅನ್ನುವುದು ಮುದರುವಿಗೆ ಕೇಳಿ ನಿನ್ನೆ ರಾತ್ರಿ ತೋಟದಲ್ಲೇ ಮಲಗಿದ್ದ ಎಂದು ನಗುತ್ತಾಳೆ ಮೋಂಟ ಹೌದು ಅಡಿಕೆ ಕಾಯುತ್ತಿದ್ದೆ ಅಂದಾಗ ಭಟ್ಟರಿಗೆ ಸಂಬಳ ಕೊಡುವು ಸಾರ್ಥಕ ಅನ್ನಿಸುತ್ತದೆ.
ಎರಡುದಿನದಿಂದ ಕೆಲಸಕ್ಕೆ ಬಾರದ ಮುದರುವಿಗೆ ಗದರದಿದ್ದರೆ ಸರಿ ಇಲ್ಲ ಅಂದವರೇ ಭಟ್ಟರು ಎರಡು ಹೆಜ್ಜೆ ಮುಂದೆ ಹೋಗಿ ಎಲೆಯಡಿಕೆ ಹಾಕಿದ ಅಗಲಬಾಯಿ ತೆರೆದವರೆ ಸುಮ್ಮನಾಗುತ್ತರೆ ಮಾತೇ ಹೊರಡುವುದಿಲ್ಲ.
ಮುದರುವಿನ ಎತ್ತರದೆದೆ ಅವರ ಕಣ್ನು ಸೆಳೆಯುತ್ತದೆ ದೂರದಲ್ಲಿರುವ ಅವಳ ಅರೆನಗ್ನ ಮಗನೂ ನಗ್ನ ಮಗಳು ಕಾಣಿಸುತ್ತಾಳೆ...ಆದರೂ ಭಟ್ತರಿಗೆ ಅಲ್ಲಿಂದ ಕಣ್ಣು ಕದಲಿಸಲಾಗುವುದಿಲ್ಲ ಮೋಂಟ ಅವರ ಹತ್ತಿರ ಬರುತ್ತಾನೆ ಅವರನ್ನೂ ಹೆಂಡತಿಯನ್ನೂ ನೋಡುತ್ತಾನೆ ,ಹೆಂಡತಿಗೆ ಆಚೆ ಹೋಗುವಂತೆ ಕೈಸನ್ನೆ ಮಾಡುತ್ತಾನೆ ಅವಳು ನೋಡಲೇ ಇಲ್ಲ,ಭಟ್ಟರ ತೆರೆದ ಬಾಯಿ ಕಣ್ಣುಗಳು ಹಾಗೇ ಇದ್ದವು.ಮುದರುವಿನ ಉಬ್ಬಿದ ಸೆರಗಡಿಯಿಂದ ಒಂದು ನಾಯಿಮರಿ ಜಾರಿ ಕೆಳಗೆ ಬೀಳುತ್ತದೆ.ಅದರ ಬಾಯ ಕೊನೆಯಲ್ಲಿರುವ ಹಾಲಿನ ಹಸಿ ಹಸಿ ಹನಿಯನ್ನು ನಾಲಿಗೆಯಿಂದ ಸವರಿಕೊಳ್ಳುತ್ತದೆ.ಸೆರಗೊಳಗೆ ಇನ್ನೂ ಎರಡು ಮರಿಗಳಿರುವುದು ಭಟ್ಟರಿಗೆ ಅರಿವಿಗೆ ಬಂತು. ಮೋಂಟ ಮೆತ್ತಗೆ ಅವರ ಕಿವಿಗುಸಿರಿದ ಮೊನ್ನೆ ಮಿಣ್ಕು ತೀರ್ಕೊಂಡ್ಲು ಈಗ ಇವಳೇ ಮರಿಗಳಿಗೆ...
ಇದ್ಯಾವುದರ ಪರಿವೆಯೇ ಇಲ್ಲ ಅನ್ನುವಂತೆ ಮುದರು ಜಾರಿ ಬಿದ್ದ ಮರಿಯನ್ನು ಮತ್ತೆ ಸೆರಗೊಳಗೆ ಸೇರಿಸುತ್ತಾ ಮೆತ್ತಗೆ ಆ ಮರಿಗಳಿಗೆ ಗದರತೊಡಗಿದಳು .
ಯಾಕೆ ಅವಸರ ಪಟ್ಕೋತಿದ್ದೀರಾ...ಅವಳ ಮುಂದೆ ಕುಳಿತು ತಾಯಿಯನ್ನೇ ನೋಡುತ್ತಿದ್ದ ಮಕ್ಕಳ ಮುಖದಲ್ಲಿ ಗೊತ್ತಿರದ ಕಿರುನಗು ಆಗಾಗ ಬಂದು ಹೋಗುತ್ತಿತ್ತು.
ಮೋಂಟನಿಗೆ ಭಟ್ಟರು ಮುದರು ಹತ್ತು ದಿನ ಕೆಲಸಕ್ಕೆ ಬರುವುದು ಬೇಡ ಸಂಬಳ ಕಟ್ಟು ಮಾಡುವುದಿಲ್ಲ ಅಂದು ತುಂಬಿಕೊಂಡ ಕಣ್ಣೀರು ಒರಸುತ್ತಾ ಹಿಂತಿರುಗಿದರು.
ಅಮ್ಮಾ ನಿನಗೆಷ್ಟು ರೂಪ...?

Monday, June 15, 2009

ತಲೆಬರಹ ನೀವೇ ಇಡಿ

ಕುಗ್ರಾಮ,ಸರಕಾರವೇ ಸಾರಿಬಿಟ್ಟಿದೆ.ಕುಗ್ರಾಮದಲ್ಲಿ ಇರುವ ಕೆಲವು ಮನೆಗಳಲ್ಲೂ ಹಲವರ ಗಮನಕ್ಕೆ ಕಣ್ಣಿಗೆ ಬೀಳದ ಮಳೆಗಾಲದಲ್ಲಿ ಬೊಬ್ಬಿಟ್ಟು ಹರಿಯುವ ತೊರೆ ಬೇಸಿಗೆಯಲ್ಲಿ ತನ್ನಿರುವಿಗಷ್ಟೇ ಬಾಯಾರಿಕೆಯ ನೀರಿಟ್ಟುಕೊಳ್ಳುತ್ತದೆ.
ಅದರ ಅಂಕುಡೊಂಕಿನ ಸಂದಲ್ಲಿ ಅಡಿಕೆಮರದ ಸೋಗೆಯ ಗುಡಿಸಲು,ಒಬ್ಬನೇ ವಾಸ ಇರುವ ಗುಡಿಸಲು.ಯಾರ ತಂಟೆಗೂ ಹೋಗದ ಯಾರ ಮುಖವನ್ನೂ ನೋಡಲಿಚ್ಚಿಸದ ಅರೆಗೂನುಬೆನ್ನಿನ ಮಧ್ಯವಯಸ್ಕ ಅದರೊಡೆಯ.ಗೆಣಸು ಬೆಳೆಸಿ ತಿನ್ನುತ್ತನೆ ಕೆಲಸೇರಷ್ಟೇ ಬೆಳೆಸುವ ಬತ್ತವನ್ನು ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡಿ ಉಣ್ಣುತ್ತಾನೆ.ಅದರ ತವುಡನ್ನೂ ಬಿಡದೆ ಕುದಿಸಿ ಕುಡಿಯುತ್ತಾನೆ ಇಷ್ಟಕ್ಕೋ ಬಡತನಕ್ಕೋ ಅಥವಾ ಆಹಾರಕ್ಕೂ ಬೇರೆಕಡೆ ಹೋಗೋದು ಬೇಡ ಎಂದೋ...ಮೀನುತಿನ್ನುವ ಬಾಯಿಚಪಲಕ್ಕೆ ಮಳೆಗಾಲದಲ್ಲಿ ಮೈಗೆ ಪ್ಲಾಸ್ಟಿಕ್ ಸುತ್ತಿಕೊಂಡು ಗಾಳ ಹಾಕುತ್ತಾನೆ,ಬೇಸಿಗೆಯಲ್ಲಿ ಅದೇಬತ್ತಿಹೋಗುವ ತೊರೆಯಲ್ಲಿ ಕಾಲ್ಲುಗಳ್ನ್ನು ಸರಿಸಿಯೋ ಇಲ್ಲ ಚಿಕ್ಕ ಚಿಕ್ಕ ಬಿಲಗಳಿಗೆ ಕೈ ಹಾಕಿಯೋ ಏಡಿ ಹಿಡಿಯುಇತ್ತಾನೆ.ಆಗಲೂ ಜನರ ಕಣ್ಣಿಗೆ ಜಾಸ್ತಿಯಾಗಿ ಬಿದ್ದವನಲ್ಲ
ಹೀಗಿರುವ ಆಅರೆಬೆನ್ನಿನವನ ಬಗ್ಗೆ ಕಳ್ಳು ಕುಡಿದು ಬೀಡಿಸೇದುವವರ ಬಾಯಲ್ಲಿ ಮಾತಲ್ಲಿ ತೇಲಿಹೋಗಿದ್ದನಷ್ಟೆ.
ಯಾವುದೇ ಸರಕಾರಿ ಧಾಖಲೆಗಳಿಲ್ಲದ ಜೀವನ ಅವನದಾಗಿತ್ತು.
ಅದೊಂದುವರುಷದ ಜಡಿಮಳೆಯ ದಿನ ಬರುವವರೆಗೂ ಆ ಪುಟ್ಟ ಸೋಗೆ ಮನೆಯ ಬೆತ್ತಲಸತ್ಯ ಬೆತ್ತಲಾಗಲೇ ಇಲ್ಲ.
ಜೋರಾದ ಗಾಳಿಗೆ ತೆಂಗಿನ ಮರ ಇನ್ನು ಬಗ್ಗಿದರೆ ಸಾವೇ ಅನ್ನುವಷ್ಟು ವಾಲುತ್ತಿದೆ,ಈ ಹಿಂಸೆ ಇನ್ನುಬೇಡ ಅಂದುಕೊಂಡ ಕೆಲ ಅಡಿಕೆಮರಗಳು ತುಂಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವು...ಗೊನೆಹೊತ್ತು ಭಾರವಾಗಿದ್ದ ಬ್ಬಳೀಎ ತಾಯ್ತನವೆಸಾಕೆಂದು ನೆಲದಪ್ಪುಗೆಗೆ ಮಲಗೇ ಬಿಟ್ಟವು...ತೊರೆಯಲ್ಲಿಕೆಂಪುನೀರು ಹಲಸು ತೆಂಗಿನಕಾಯಿಗಳನ್ನು ತೇಲಿಸುತ್ತ ಕುದುರೆಜಿಗಿತದೊಂದಿಗೆಆಚೀಚೆಯ ತೋಟಗದ್ದೆಗಳನ್ನು ಸವರುತ್ತಾ...ಒಂದಷ್ಟು ಹೊತ್ತಿಗೆ ಇಡಿಯಾಗಿ ನುಂಗಿಬಿಟ್ಟಿತ್ತು.
ಮನಸ್ಸಿಗೆ ಮಂಪರು ಕವಿದಂತೆ ಆದಿನದ ವಾತಾವರಣಕ್ಕೂ ರಭಸದ ಮಳೆಯ ಮಂಪರು ಕವಿದಿತ್ತು,ಅಸ್ಪಸ್ಟ ಚಿತ್ರಣದಲ್ಲೂ ಮಿಂಚಿನ ಸ್ಪಸ್ಟತೆಯಗೆರೆಗಳು ಜೋರಾಗೇ ತನ್ನತನವನ್ನು ಮೂಡಿಸಿಹೋಗುತ್ತಿತ್ತು.
ಹಗಲಲ್ಲೂ ಕತ್ತಲು ಬೆಳಕಿನಾಟದಲ್ಲಿ ಅಂಕುಡೊಂಕಿನ ಸಂದಿನಲ್ಲಿದ್ದ ಸೋಗೆ ಮನೆ...ಶಿಥಿಲವಾಗುತ್ತಾ ಹೋಗುತ್ತಿತ್ತು...ಆಮನೆಯ ಗೋಡೆಗೆ ಹಿಂಸೆಯ ಹೆರಿಗೆನೋವು ಕಾಡುತ್ತಿತ್ತು....ತನ್ನನ್ನು ಬಗಿದುಕೊಳ್ಳಲೆಂದೇ ಈ ಪರಿಯ ಮಳೆಯನ್ನು ಅದುಬೇಡಿಕೊಂಡಿತ್ತೋ ಏನೋ...ಮಳೆಗೆ ಇನ್ನಷ್ಟು ಮತ್ತಷ್ಟುತನ್ನನ್ನು ತೋಯಿಸಿಕ್ಪೊಳ್ಳುತ್ತಾ ಇಂಚಿಂಚಾಗಿ ಬಾಯಿತೆರೆಯತೊಡಗಿತು.
ಆಮನೆಯಾಲ್ಲ್ಲಿ ಅಲ್ಲಿಯವರೆಗೂ ಇರದ ಹೊರಜಗತ್ತಿಗೆ ಕಾಣದ ಜೀವವೊಂದು ಸುರಿಯುವ ಆ ಮಳೆಗೆ ತೆವಲುತ್ತ ಸೇರಿಸಿಕೊಂಡಿತು.
ಅರೆಪ್ರಾಯದ ಹೆಣ್ನುಮಗಳು...ಕೈ ಕಾಲು ಬಾಯಿಗೆ ಬಟ್ಟೆಬಿಗಿದ ಸ್ಥಿತಿಯಲ್ಲಿ..ಅದೆಷ್ಟೋವರ್ಷಗಳಿಂದ ಜಗತ್ತಿನ ಬೆಳಕನ್ನು ನೋಡದ ಜೀವ...ಬಿರುಸು ಮಳೆಯಲ್ಲೂಪ್ರಪಂಚದ ಕಣ್ಣಿಗೆಬಿದ್ದಳು.ಪುಟ್ಟ ಕಂದನಂತೆ ತೆವೆಳುತ್ತ ತೆವಳುತ್ತಾ ರೋದಿಸುತ್ತ.
ಅವಳ ಹಿಂದೆ ಅರೆಗೂನುಬೆನ್ನಿನ ಮನುಷ್ಯ ಕರಿನೆರಳಿನಂತೆ ಅವನೂ ನೆನೆಯುತ್ತ ಸ್ಪಷ್ಟವಾಗತೊಡಗಿದ ತುಕ್ಕುಹಿಡಿದಕತ್ತಿಯನ್ನು ಗಟ್ಟಿಯಾಗಿ ಹಿಡಿದಿದ್ದ.
ಮೇಲಿನ ಮನೆಯ ರಾಮಣ್ಣ ರೈ ಗಳ ನಾತಿ ನೀರಲ್ಲಿ ಕೊಚ್ಚಿಹೋಗುತ್ತಿತ್ತು ಕೆಲಸದಾಳುಗಳು ಅದನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊರೆಯ ಆಚೀಚೆ ನುಗ್ಗಿದ ನೀರಲ್ಲಿ ನೆಗೆಯುತ್ತ ಬರುತ್ತಿದ್ದವರಿಗೆ ಆ ಸೋಗೆಮನೆಯ ಇಬ್ಬರು ಕಾಣಿಸುತ್ತಾರೆ.ಅವರನ್ನು ಕಂಡ ಕೆಲಸದಾಳುಗಳು ಜೋರಾದ ದ್ವನಿಯಲ್ಲಿ ಹೋಯ್ ಹೋಯ್ ಎಂದು ಕಿರುಚಾಡುತ್ತಾರೆ. ಅನಿರೀಕ್ಷಿತವಾದ ಈ ಘಟನೆಯಿಂದ ಗಾಭರಿಯಾದ ಅರೆಗೂನುಬೆನ್ನಿನವ ಹಿಂದೆಸರಿಯುತ್ತಾನೆ ಅವಳನ್ನು ಕಡಿಯಬೇಕಿದ್ದ ಕೈಯಿಂದ ಕತ್ತಿ ಕೆಳ ಬೀಳುತ್ತದೆ.ರೈಗಳ ನಾಯಿ ಕುಯ್ ಕುಯ್ ಅಂದುಕೊಂಡೇ ನೋಟದಿಂದಾಚೆ ಸರಿಯುತ್ತದೆ.
ಅರೆಗೂನುಬೆನ್ನಿನವ ಕೆಲಸದಾಳುಗಳಿಂದ ತಪ್ಪಿಸಿಕೊಳ್ಲುವ ಪ್ರಯತ್ನದಲ್ಲಿ ರಭಸವಾಗಿ ತೊರೆಯಾಚೆ ಜಿಗಿಯುತ್ತಾನೆ...ಲೆಕ್ಕಾಚಾರ ತಪ್ಪಿಹೋಯ್ತು,ಮಳೆಯ ಚಳಿ ಕಾಲುಗಳಿಗೆ ನಡುಕ ಹತ್ತಿಸುತ್ತವೆ ತೊರೆಅವನ ಕಾಲುಗಳನ್ನುಹಿಡಿದೆಳೆಯುತ್ತದೆ...ಆಳಕ್ಕೆ...
ಅವಳ ಕಟ್ಟು ಬಿಡಿಸಲಾಯಿತು,ರೈಗಳ ನಾಯಿ ಹೇಗೋ ದಡ ಸೇರಿ ಕೆಲಸದವರನ್ನು ಸೇರಿಕೊಂಡಿತು...ಅವರು ಅರ್ಧದಲ್ಲೆ ನಿಂತಿದ್ದಕ್ಕೆ ಅದಕ್ಕೆ ಬೇಜಾರಿಗೋ ಅಥವಾ ಒಳ್ಳೆಯದೇ ಆಯಿತೆಂದೋ ಕುಯ್ ಕುಯ್ ಅನ್ನತೊಡಗಿ ಮೈಕೈ ನೆಕ್ಕತೊಡಗಿತು.
ಋತುಮಾನಗಳು ಬದಲಾಗಿದೆ
ಆ ನಾಯಿಯನ್ನು ಕಾಡಿಬೇಡಿ ರಾಮಣ್ಣರೈಯವರಿಂದ ಪಡೆದು ಅವಳು ಜೀವದ ಹಾಗೆ ನೋಡಿಕೊಳ್ಳುತ್ತಿದ್ದಾಳೆ,ಅವಳ ಮನೆ ತೊರೆಯಿಂದ ಸ್ವಲ್ಪಮೇಲೆ ಊರವರಿಂದ ಹೆಂಚುಹಾಕಿಸಿಕೊಂಡು ನಿಂತಿದೆ...
ಬೆತ್ತಲೆ ಸತ್ಯ ಇನ್ನೂ ಕತ್ತಲೆಯಲ್ಲಿ ಅಡಗಿದೆ... ಕಷ್ಟ ಆಗ್ತಿದೆ ಆದ್ರು ಪ್ರಯತ್ನ ಮಾಡ್ತೀನಿ... ಅಮ್ಮ ಸತ್ತ ಆ ಮಗಳನ್ನು ಋತುಮತಿಯಾದ ನಂತರ ಬಂದಿಸಲಾಗಿತ್ತು...ಕೈ ಕಾಲು ಬಾಯಿ ಕಟ್ಟಲಾಗಿತ್ತುಹುಟ್ಟುರೂಪದಲ್ಲೆ...ನಂತರ ಕಳೆದದ್ದು ಹಲವು ಮಳೆ ಬಿಸಿಲು ಚಳಿಗಳ ವರ್ಷಗಳು....
ಅವಳದೇ ಅಪ್ಪ...ಕ್ಷಮಿಸಿ,
ಮುಂದುವರೆಸಲು ಕಷ್ಟ ಆಗ್ತಿದೆ....

Friday, June 12, 2009

ಗೆಳತಿ-೧೬

ಹಾಳೆಗೆ ಪೆನ್ನಿನ ಸಂಗದಾಸೆ ಶಾಯಿಯನ್ನು
ಲೀನ ಮಾಡಿಸಿಕೊಳ್ಳುವಾಸೆ
ಬಣ್ಣವಿಲ್ಲದ ಕಾಮ.
ಹಸಿದ ಮುಖವ ನನಗೆ ತೋರಿಸಿ
ಮುತ್ತಿಕ್ಕುವೆಯಾ ಎಂದು ನೀನು
ನೋಡಿದಂತಾ ಆಸೆ

ಗೆಳತಿ-೧೫

ನೀ ನಡೆವ ಹಾದಿಯಲ್ಲಿ ನಾ ಹೇಗಿದ್ದರೂ ಸರಿಯೆ
ಅಂದ
ಕ್ರಷ್ಣ ಮುಳ್ಳಾಗಿ ಚುಚ್ಚಿದ ಅವನರ್ಥದಲ್ಲಿ ಅದುಪರಕಾಯ ಪ್ರವೇಶ
ನಿನಗೋ ಸಹಿಸಲಸಾಧ್ಯ ನೋವು
ಆ ನೋವಲ್ಲೆ ಅವನ್ಯಾವಾಗ ನಿನ್ನ ಕಿವಿಸಂದಿಯಲಿ ಬೆರಳಾಡಿಸಿ
ನಲ್ಲೇ ಅಂದನೋ
ನೋವೇ ಮರೆತು ನೀ ತಬ್ಬಿದಿಯಲ್ಲೇ...ಹೀಗಿದ್ದರೂ ಇಷ್ಟ ಎಂದು
ಕೈ ಹಾರ ಬಳಸಿ ಬಳಸಿ
ನಿನ್ನಂತ ಹಾರಗಳೆಷ್ಟೋ ಗೆಳತಿ ಕ್ರಷ್ಣ ಪೂಜೆಗೆ

ಗೆಳತಿ-೧೫

ಗೆಳತಿ-೧೪

ನಿನ್ನ ವಯಸ್ಸು ಕೇಳೋದಿಲ್ಲ ನಡಿಗೆಯೇ ಹೇಳುತ್ತಿದೆ ನಿನ್ನ ಬಯಕೆ
ಕ್ರಷ್ಣನ ಧ್ಯಾನಿಸಲು ನೀ ಹೊರಟಿರುವೆ ಎಂದು
ನಿನ್ನ ಕಣ್ನುಗಳೆ ಬೇಡುತ್ತಿವೆ ಅರ್ಪಣೆಯ ಒಪ್ಪಿಸಿಕೋ ಎಂದು
ನಿನ್ನಿಷ್ಟ, ಆದರೂ ಹುಶಾರು ಅವನು ಸಾಚಾ ಅಲ್ಲ ಕಳ್ಲ
ಮತ್ತೆ ಮತ್ತೆ ನೀ ಬೇಕೆಂದು ಅನಿಸುವಾಗಲೆಲ್ಲ ಮತ್ತೆ ಮತ್ತೆ ಬಟ್ಟೆ
ಕದಿಯುತ್ತಾನೆ.
ನಿನ್ನ ಯವ್ವನ ಅವನಪ್ರಾಣ.

ಗೆಳತಿ-೧೩

ಕಾಮದ ಕಣ್ಣೀರಲ್ಲೂ ಬೆಳೆಯುತ್ತೀಯಾ
ಯವ್ವನದ ಬಿಸಿಲಲ್ಲೂ ಅರಳುತ್ತೀಯ
ಬೆಚ್ಚಗಿನ ಮನಸ್ಸು ತಣ್ನಗಾಗುತ್ತ ಮತ್ತೆ ಮುದುರುತ್ತೀಯ
ಹಲವು ದಿನಗಳ ಆಟದಲ್ಲಿ ಅದೆಷ್ಟು ಜನರನ್ನ
ತನ್ನತ್ತ ಸೆಳೆಯುತ್ತೀಯ... ಎಲ್ಲರಿಗೂ
ಆಸೆ ತೋರಿಸುತ್ತ ತೋರಿಸುತ್ತ ನಿರಾಶೆಯ ಕೈಗಿಟ್ತು ಗರ್ಭ
ಕಟ್ಟುತ್ತೀಯ...
ಓ ತಾವರೆಯೆ ನೀನು ಗೆದ್ದೆಯಾ
ಕ್ರಷ್ಣ ಸೋತನಾ